February 1, 2026

ಶಿಕ್ಷಣ ಸಂಸ್ಥೆಗಳಲ್ಲಿ ಶಿರವಸ್ತ್ರ ನಿಷೇಧವು ಸಾಂವಿಧಾನಿಕ ಹಕ್ಕಿನ ನಿರಾಕರಣೆ: ವೆಲ್ಫೇರ್ ಮಹಿಳಾ ಘಟಕ ಆತಂಕ

0
IMG-20220124-WA0004.jpg

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸ ಒದಗಿಸಿದ ಮತ್ತು ಪತ್ರಿಕಾ ಮಾಧ್ಯಮಗಳ ಪುಟ ತುಂಬಿಸುತ್ತಿರುವ ಮುಸ್ಲಿಮ್ ವಿದ್ಯಾರ್ಥಿನಿಯರ ಶಿರವಸ್ತ್ರ ನಿಷೇಧ ಎಂಬ ವಿವಾದವು ನಿಜವಾಗಿಯೂ ಒಂದು ರಾಜಕೀಯ ಪ್ರೇರಿತ ಹಿನ್ನೆಲೆಯಿಂದ ಸೃಷ್ಟಿಸಿದ ಕೃತಕ ಸಮಸ್ಯೆಯಾಗಿದೆ.

ಯಾಕೆಂದರೆ ಮುಸ್ಲಿಂ ಹೆಣ್ಣು ಮಕ್ಕಳು ಇಷ್ಟೊಂದು ವರ್ಷಗಳಿಂದ ಇದನ್ನು ತಮ್ಮ ಸಾಂವಿಧಾನಿಕ ಹಕ್ಕುಗಳಾದ, ಧಾರ್ಮಿಕ ಹಕ್ಕು ಮತ್ತು ಸಭ್ಯ ವಸ್ತ್ರಧಾರಣೆಯ ಹಕ್ಕುಗಳೋಪಾದಿಯಲ್ಲಿ ಅನುಸರಿಸುತ್ತಾ ಬಂದಿರುವರು. ಮಾತ್ರವಲ್ಲದೆ, ಇದು ಯಾವುದೇ ಸಮವಸ್ತ್ರ ಪದ್ಧತಿಯನ್ನು ಉಲ್ಲಂಘಿಸದೆ ಸಂಸ್ಥೆಗಳ ನಿಯಮಿತ, ನಿಗದಿತ ಬಣ್ಣದಲ್ಲೇ ಅವರು ಅದನ್ನು ಧರಿಸುತ್ತಲೇ ತರಗತಿಗಳಿಗೆ ಹಾಜರಾಗಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಪ್ರತಿಭೆಯನ್ನು ಬೆಳಗಿಸಿ ರಾಜ್ಯ ಮಟ್ಟದಲ್ಲಿಯೂ, ರಾಷ್ಟ್ರ ಮಟ್ಟದಲ್ಲಿಯೂ ತಮಗೂ ತಮ್ಮ ವಿದ್ಯಾ ಸಂಸ್ಥೆಗಳಿಗೂ ಉತ್ತಮ ಹೆಸರನ್ನು ಗಳಿಸಿಕೊಂಡೆ ಬಂದಿದ್ದು ಇದೀಗ ಇದರ ವಿರುದ್ಧ ಧ್ವನಿ ಎತ್ತಿರುವುದು ಖಂಡಿತಾ ಅಸಂವಿಧಾನಿಕವಾಗಿದೆ ಮಾತ್ರವಲ್ಲ ರಾಜ್ಯದ ಶಿಕ್ಷಣ ಸಚಿವರು ಕೂಡಾ, ಪ್ರಾಯಶಃ ತಮ್ಮ ಪ್ಯಾಸಿಸ್ಟ್ ಸರ್ಕಾರದ ಅಥವಾ ಅದರ ನಾಯಕರ ಆದೇಶದ ಮೇರೆಗೆ ಇರಲೂಬಹುದಾದರೂ, ಶಿರವಸ್ತ್ರಧಾರಣೆ ಅಶಿಸ್ತು ಎಂಬ ವಿಪರ್ಯಾಸದ ಹೇಳಿಕೆ ನೀಡಿರುವುದು ವಿಷಾದನೀಯ ವಿಚಾರವಾಗಿದೆಯೆಂಬುವುದಾಗಿ ವೆಲ್ಫೇರ್ ಪಾರ್ಟಿ ಅಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ವಾಮಂಜೂರು ಖಂಡಿಸಿ ತಮ್ಮ ತೀವೃ ಆತಂಕ ವ್ಯಕ್ತಪಡಿಸಿದರಲ್ಲದೆ, ಇಷ್ಟೊಂದು ಅನಗತ್ಯ ವಿವಾದವನ್ನು ತಕ್ಷಣ ಪರಿಹರಿಸಿ ಮಕ್ಕಳಿಗೆ ಸಂವಿಧಾನ ಬದ್ದವಾದ ಅವಕಾಶದೊಂದಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಸರಕಾರವನ್ನು ಕೋರಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!