February 1, 2026

ಮುಸ್ಲಿಮರನ್ನುದ್ದೇಶಿಸಿ ಭಾಷಣ ಮಾಡಿದ ಆರೋಪ: ನವಜೋತ್ ಸಿಂಗ್ ಸಿಧು ಸಲಹೆಗಾರನ ವಿರುದ್ಧ ಎಫ್‌ಐಆರ್‌ ದಾಖಲು

0
Screenshot_2022-01-24-11-28-27-74_680d03679600f7af0b4c700c6b270fe7.jpg

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧುರ ಸಲಹೆಗಾರ, ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಅವರು ಮುಸ್ಲಿಮರನ್ನುದ್ದೇಶಿಸಿ ಭಾಷಣ ಮಾಡಿದ ಆರೋಪದಲ್ಲಿ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧುರ ಸಲಹೆಗಾರ, ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಕೆಲ ದಿನಗಳ ಹಿಂದೆ ಭಾಷಣ ಮಾಡುವಾಗ ಒಂದು ಸಮುದಾಯದ ವಿರುದ್ಧವಾಗಿ ಮಾತನಾಡಿದ್ದಾರೆ ಎಂದು ಪೊಲೀಸರು ಆತನ ಮೇಲೆ ಐಪಿಸಿ ಸೆಕ್ಷನ್ 153-ಎ ದಾಖಲಿಸಿದ್ದಾರೆ.

ಎಫ್‌ಐಆರ್‌ ಬಗ್ಗೆ ಪ್ರತಿಕ್ರಿಯಿಸಿದ ಮೊಹಮ್ಮದ್ ಮುಸ್ತಫಾ, ಈ ಎಫ್‌ಐಆರ್‌ ಅಸಂಬದ್ಧ. ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸುತ್ತಿರುವಂತೆ ನಾನು ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ. ಭಾಷಣದಲ್ಲಿ ನಾನು ‘ಫಿಟ್ನೆ’ ಪದವನ್ನು ಬಳಸಿದ್ದೆ, ಆದರೆ ಆ ಪದವೆ ಈಗ ಕಾನೂನು ಉಲ್ಲಂಘಿಸುವವರು ಎಂದು ಹೇಳಲಾಗಿದೆ. ಇನ್ನು ನನ್ನ ಮೇಲೆ ಹಲ್ಲೆಗೆ ಯತ್ನಿಸಿದ ಮುಸ್ಲಿಮರ ಗುಂಪಿನ ಮೇಲೆ ನಾನು ಕೋಪಗೊಂಡಿದ್ದೇನೆ. ನಾನು ಅವರಿಗೆ ಎಚ್ಚರಿಕೆ ನೀಡಿದ್ದೇನೆಯೇ ಹೊರತು ಹಿಂದೂಗಳಿಗೆ ಅಲ್ಲ, ಎಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!