February 1, 2026

ಭಾರತದ ಅತಿ ಎತ್ತರದ ವ್ಯಕ್ತಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

0
image_editor_output_image334579938-1643003511109.jpg

ಲಖನೌ: ದೇಶದ ಅತಿ ಎತ್ತರದ ವ್ಯಕ್ತಿ ಎನಿಸಿಕೊಂಡಿರುವ ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯ ಧರ್ಮೇಂದ್ರ ಪ್ರತಾಪ್ ಸಿಂಗ್ ಅವರು ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಶನಿವಾರ ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಸೇರ್ಪಡೆಯಾದರು. ಅವರು 8 ಅಡಿ 1 ಇಂಚು ಎತ್ತರವಿದ್ದಾರೆ.

ಪಕ್ಷದ ಪರವಾಗಿ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸುವುದಾಗಿ ಪ್ರತಾಪ್ ಸಿಂಗ್ ಅವರು ಪ್ರಕಟಿಸಿದ್ದಾರೆ. ‘ಸಮಾಜವಾದಿ ಪಕ್ಷದ ನೀತಿಗಳು ಹಾಗೂ ಕಾರ್ಯಕ್ರಮಗಳಿಂದ ಪ್ರೇರಿತನಾಗಿ ಪಕ್ಷ ಸೇರಿದ್ದೇನೆ. ಅಖಿಲೇಶ್ ಅವರು ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲಿದ್ದಾರೆ’ ಎಂದು ಹೇಳಿದ್ದಾರೆ.

ಅವಿವಾಹಿತರಾಗಿರುವ 46 ವರ್ಷದ ಪ್ರತಾಪ್‌ ಸಿಂಗ್ ಅವರಿಗೆ ಈಗಲೂ ಉದ್ಯೋಗ ಸಿಕ್ಕಿಲ್ಲ. ತಮ್ಮ ಕುಟುಂಬದವರು ಹಾಗೂ ಸ್ನೇಹಿತರು ಸಾಕಷ್ಟು ಹುಡುಕಾಡಿದರೂ, ತಮಗೆ ಹೊಂದಿಕೆಯಾಗುವ ಜೋಡಿ ಸಿಕ್ಕಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಪ್ರತಾಪ್, ಎತ್ತರದ ನಿಲುವಿನಿಂದಾಗಿ ಹೋದ ಕಡೆಯೆಲ್ಲಾ ಜನರಿಂದ ಗುರುತಿಸಿಕೊಳ್ಳುತ್ತಾರೆ. ಜನರು ಇವರನ್ನು ಸುತ್ತುವರಿದು ಸೆಲ್ಫಿ ತೆಗೆದುಕೊಳ್ಳುತ್ತಾರೆ.

‘ಸಮಾಜದ ಎಲ್ಲ ವರ್ಗಗಳಿಗೂ ನೋವುಂಟು ಮಾಡಿರುವ ಬಿಜೆಪಿಯ ದೋಷಪೂರಿತ ನೀತಿಗಳ ಬಗ್ಗೆ ಜನಜಾಗೃತಿ ಮೂಡಿಸುತ್ತೇನೆ’ ಎಂದು ‘ಲಂಬೂಜಿ’ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!