March 20, 2026

ಕಾರ್ಕಳ: ಕೊರಗಜ್ಜ‌ ವೇಷ ಹಾಕಿ ದೈವಕ್ಕೆ ಅವಮಾನ: ದೂರು ದಾಖಲು

0
Screenshot_20220121-210502_Chrome.jpg

ಕಾರ್ಕಳ: ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿರುವುದಾಗಿ ಆರೋಪಿಸಿ ನೀಡಿರುವ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈದುವಿನ ರವೀಂದ್ರ ಎಂಬ ವ್ಯಕ್ತಿ ಕೊರಗಜ್ಜಗೆ ಅವಮಾನ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಕೊರಗಜ್ಜನ ವೇಷ ತೊಟ್ಟು ಅವಮಾನಗೊಳಿಸಿ, ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡು ವಿಕೃತಿ ಮೆರೆದಿದ್ದಾನೆ. ಜ. 18ರಂದು ಕೊರಗಜ್ಜ ದೈವದ ವೇಷ ಹಾಕಿ ರವೀಂದ್ರ ಅವಮಾನಗೈದಿದ್ದ.

ರವೀಂದ್ರನ ಮನೆಗೆ ಕಾರ್ಕಳ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ರವೀಂದ್ರ ಯಕ್ಷಗಾನ ಮೇಳವೊಂದರಲ್ಲಿ ದುಡಿಯುತ್ತಿರುವ ಬಗ್ಗೆ ಸದ್ಯ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *

error: Content is protected !!