February 1, 2026

ಕರ್ನಾಟಕ ಪ್ಯಾರಾ ಮೆಡಿಕಲ್ ಬೋರ್ಡ್ ಫಲಿತಾಂಶ ಪ್ರಕಟ: ಗೇರುಕಟ್ಟೆ ‘ಮನ್ಶರ್’ ಸಂಸ್ಥೆಯ ವಿದ್ಯಾರ್ಥಿಗಳ ವಿಶಿಷ್ಟ ಸಾಧನೆ

0
IMG-20220121-WA0004.jpg

ಬೆಳ್ತಂಗಡಿ: ಕರ್ನಾಟಕದ ಪ್ಯಾರ ಮೆಡಿಕಲ್ ಬೋರ್ಡ್ ನ 2020- 21 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿರುವ, ಸರಕಾರದ ಅಂಗೀಕೃತ ಮನ್ಶರ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆ ಮಾಡಿದ್ದಾರೆ.

ಪ್ರಥಮ ವರ್ಷದ ಡಿಎಂಐಟಿ ಹಾಗೂ ತೃತೀಯ  ವರ್ಷದ ಡಿಎಮ್‌ಎಲ್‌ಟಿ ಯಾ ಎಲ್ಲಾ ವಿದ್ಯಾರ್ಥಿಗಳ ಉತ್ತೀರ್ಣತೆಯೊಂದಿಗೆ ಕಾಲೇಜಿಗೆ ಶೇ. 100 ಫಲಿತಾಂಶ ದೊರೆತಿದೆ.

ಇದಲ್ಲದೇ ಪ್ರಥಮ ವರ್ಷದ ಡಿಎಂಐಟಿ ವಿದ್ಯಾರ್ಥಿನಿಗಳಾಗಿರುವ ಮರಿಯಮ್ಮ ಬೀವಿ ಭೌತಶಾಸ್ತ್ರ100/100,ರಸಾಯನಶಾಸ್ತ್ರ 100/100,ಜೀವಶಾಸ್ತ್ರ 94/100 , ಸಫಿನಾ ಭೌತಶಾಸ್ತ್ರ 94/100,ಇಂಗ್ಲಿಷ್ 93/100 ಹಾಗು ಫಾತಿಮತ್ ಸಫಾ ಭೌತಶಾಸ್ತ್ರ 99/100 , ಡಿಎಮ್‌ಎಲ್‌ಟಿ ವಿಭಾಗ ದ ಅಫೀಫಾ ಭೌತಶಾಸ್ತ್ರ 93/100 , ರಸಾಯನಶಾಸ್ತ್ರ 90/100 ಅಂಕಗಳನ್ನು ಪಡೆಯುವ ಮೂಲಕ ಅಪರೂಪದ ವೈಯಕ್ತಿಕ ಸಾಧನೆ ಮಾಡಿದ್ಧಾರೆ.

ಸಂಸ್ಥೆಯ ಚೇರ್ಮೆನ್ ಸಯ್ಯಿದ್ ಉಮ್ಮರ್ ಅಸ್ಸಖಾಫ್ ತಂಙಳ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಪ್ರಾಂಶುಪಾಲ ಹೈದರ್ ಮರ್ಧಾಳ, ಉಪನ್ಯಾಸಕರಾದ ಸುಪ್ರಿತಾ ಬಿ, ಗೌತಮಿ ಶರಣ್ ಪಿಆರ್, ದಿಶಾಂತ್, ಅಬುಬಕ್ಕರ್ ನಿಟ್ಟೆ ಇವರು ಅತ್ಯುತ್ತಮ ತರಬೇತಿ ನೀಡಿ ಈ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಜ್ಜುಗೊಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!