February 1, 2026

ಕಸ್ಟಡಿಯಲ್ಲಿ ಕಾನೂನು ವಿದ್ಯಾರ್ಥಿಗೆ ಚಿತ್ರಹಿಂಸೆ:
ಇನ್ಸ್ಪೆಕ್ಟರ್ ಸೇರಿ 9 ಮಂದಿ ವಿರುದ್ಧ ಪ್ರಕರಣ ದಾಖಲು

0
n3521494821642764822625b6ca0c524c33bdb32e5d97b3eeb648d1181889fdd24c1b22efd2ed36b6b39d4e.jpg

ಚೆನ್ನೈ: ಕಾನೂನು ವಿದ್ಯಾರ್ಥಿ ಅಬ್ದುಲ್ ರಹೀಂ(21) ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳು ಪುಲಿಯಾಂತೋಪ್‌ನ ಉಪ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಂತರ ಗುರುವಾರ, ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ 9 ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಎಂಕೆಬಿ ನಗರದ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಜೀಮಾ ಮತ್ತು ಎಂಟು ಪೊಲೀಸ್ ಸಿಬ್ಬಂದಿ ಕಳೆದ ಶುಕ್ರವಾರ ಕಾನೂನು ವಿದ್ಯಾರ್ಥಿಗೆ ಥಳಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಒಬ್ಬ ಪೊಲೀಸ್ ಪೇದೆ ಮತ್ತು ಹೆಡ್ ಕಾನ್‌ಸ್ಟೆಬಲ್ ಅವರನ್ನು ಅಮಾನತುಗೊಳಿಸಲಾಗಿತ್ತು.

ಕಳೆದ ಶುಕ್ರವಾರ ಕೊಡುಂಗೈಯೂರು ಬಳಿಯ ಎಂಆರ್ ನಗರದಲ್ಲಿ ಮಾಸ್ಕ್ ಧರಿಸದ ಐದನೇ ವರ್ಷದ ಕಾನೂನು ವಿದ್ಯಾರ್ಥಿ ರಹೀಂಗೆ ಪೊಲೀಸರು ಕಪಾಳಮೋಕ್ಷ ಮಾಡಿ, ಬಂಧಿಸಿದ್ದರು. ನಂತರ ರಹೀಂನನ್ನು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ನಂತರ ಠಾಣೆಯಲ್ಲೇ ಪೊಲೀಸರು ತನಗೆ ಥಳಿಸಿ, ಬೂಟಿನಿಂದ ಒದ್ದರು ಎಂದು ರಹೀಂ ಆರೋಪಿಸಿದ್ದರು. ಅಲ್ಲದೆ ಠಾಣೆಯೊಳಗೆ ಪೊಲೀಸರು ಹೇಗೆ ತನ್ನ ಮೇಲೆ ಹಲ್ಲೆ ನಡೆಸಿದರು ಎಂಬುದನ್ನು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.

ಗುರುವಾರ ಬೀದಿಗಿಳಿದ ವಕೀಲರು ಪೊಲೀಸ್ ಇನ್ಸ್‌ಪೆಕ್ಟರ್ ನಜೀಮಾ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು. ಅಲ್ಲದೆ ರಹೀಂ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.

Leave a Reply

Your email address will not be published. Required fields are marked *

error: Content is protected !!