February 1, 2026

ಉಡುಪಿ ಸ್ಕಾರ್ಫ್ ವಿವಾದ:
ಕಾಲೇಜ್ ಗೇಟ್ ಮುಂಬಾಗ ಬಿತ್ತಿ ಪತ್ರ ಪ್ರದರ್ಶಿಸಿ ನಿಂತ ಸಂತ್ರಸ್ತ ವಿದ್ಯಾರ್ಥಿಗಳು

0
IMG-20220120-WA0004.jpg

ಉಡುಪಿ: ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಹಾಕಿದ್ದಾರೆ ಎಂಬ ಕಾರಣಕ್ಕಾಗಿ ತರಗತಿಯಿಂದ ಹೊರ ಹಾಕಲ್ಪಟ್ಟ ಘಟನೆಗೆ ಇನ್ನೂ ಅಂತ್ಯಕಂಡಿಲ್ಲ. ಇಂದು ವಿದ್ಯಾರ್ಥಿಗಳು ನಮಗೆ ನ್ಯಾಯ ಒದಗಿಸಿ ಎಂದು ಕಾಲೇಜು ಗೇಟ್ ಮುಂಭಾಗ ಭಿತ್ತಿಪತ್ರ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಅಧಿಕಾರಿಗಳು ಗಮನಹರಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ, ನಮಗೆ ತರಗತಿಗಳು ಸಿಗುತ್ತಿಲ್ಲ, ನಮ್ಮ ಸಂವಿಧಾನಾತ್ಮಕ ಹಕ್ಕನ್ನು ಕಸಿದಿಟ್ಟು ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆಯೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!