February 4, 2026

ವಿಟ್ಲ: ಮುಸ್ಲಿಮರ ನರಮೇಧ ನಡೆಸಬೇಕು ಎಂದು ಕರೆ ನೀಡಿದ ಆರೋಪ:
ವಿಷ್ಣು ಪ್ರಸಾದ್ ನಿಡ್ಡಾಜೆ ವಿರುದ್ಧ ಎಫ್ ಐ ಆರ್ ದಾಖಲು

0
n349774346164215546602650366f7dfb6bd3fbcc706dd4dc229d3cf4fe6da663f37581106f2216e7d15a86.jpg

ವಿಟ್ಲ: ಇತ್ತೀಚೆಗೆ ಸಾಲೆತ್ತೂರಿನ ವರನೊಬ್ಬ ಧರಿಸಿದ್ದ ವೇಷ ಭೂಷಣಕ್ಕೆ ಸಂಬಂಧಪಟ್ಟಂತೆ ಕೋಮು ಉದ್ರೇಶಕ ಪೋಸ್ಟ್ ಹಾಕಿದ್ದ ವ್ಯಕ್ತಿಯ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲೆತ್ತೂರಿಗೆ ಬಂದ ಮದುಮಗ ಕೊರಗಜ್ಜ ದೈವವನ್ನು ಹೋಲುವ ರೀತಿಯಲ್ಲಿ ವೇಷ ಹಾಕಿದ್ದ ಇದು ಭಾರೀ ವಿವಾದವಾಗಿತ್ತು.‌ ಈ ಘಟನೆಯನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಉಲ್ಲೇಖಿಸುವಾಗ ಫೆಡರಲ್ ಬ್ಯಾಂಕಿನ ಅಧಿಕಾರಿ ವಿಷ್ಣು ಪ್ರಸಾದ್ ನಿಡ್ಡಾಜೆ ಎಂಬಾತ ಮಂಗಳೂರಿನಲ್ಲೂ ಗುಜರಾತ್ ಮಾದರಿಯಂತೆ ಮುಸ್ಲಿಮರ ನರಮೇಧ ನಡೆಸಬೇಕು. ಹಾಗಾದರೆ ಮಾತ್ರ ಅವರು ಪಾಠ ಕಲಿಯಲಿದ್ದಾರೆ ಎಂಬರ್ಥ ಬರುವ ರೀತಿಯಲ್ಲಿ ಪೋಸ್ಟ್ ಹಾಕಿದ್ದ. ಈ ಕುರಿತು ಪಿ ಎಫ್ ಐ ಸಂಘಟನೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಆಧಾರದಲ್ಲಿ ಇದೀಗ ಎಫ್ ಐ ಆರ್ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!