November 22, 2024

ಧರ್ಮಾಧಾರಿತ ಹಿಂಸಾಚಾರವನ್ನು ಉದ್ದೀಪಿಸುವ ಬಜರಂಗದಳ ಅಪಾಯಕಾರಿ ಸಂಘಟನೆ: ಫೇಸ್ ಬುಕ್

0

ನ್ಯೂಯಾರ್ಕ್: ‘ಭಾರತದಲ್ಲಿ ದ್ವೇಷ ಭಾಷಣ, ಸುಳ್ಳುಸುದ್ದಿಗಳು ಮತ್ತು ಹಿಂಸಾಚಾರದ ಸಂಭ್ರಮವನ್ನು ನಿಯಂತ್ರಿಸಲು ಫೇಸ್‌ಬುಕ್‌ಗೆ ಕಷ್ಟವಾಗುತ್ತಿದೆ’ ಎಂದು ಫೇಸ್‌ಬುಕ್‌ನ ಆಂತರಿಕ ವರದಿಯಲ್ಲಿ ವಿವರಿಸಲಾಗಿದೆ. ‘ಕೆಲವು ಗುಂಪುಗಳು ಮುಸ್ಲಿಂ ವಿರೋಧಿ ವಿಚಾರಗಳು ಮತ್ತು ಮುಸ್ಲಿಂ ಅವಹೇಳನಕಾರಿ ವಿಚಾರಗಳನ್ನು ಪದೇ ಪದೇ ಹಂಚಿಕೊಳ್ಳುತ್ತವೆ’ ಎಂದೂ ಈ ವರದಿಗಳಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಫೇಸ್‌ಬುಕ್‌ ಬಳಕೆ ಕುರಿತು, ಫೇಸ್‌ಬುಕ್‌ ಆಂತರಿಕವಾಗಿ ನಡೆಸಿದ ಸಂಶೋಧನೆಯ ವರದಿಗಳಲ್ಲಿ ಈ ಮಾಹಿತಿ ಇದೆ. ಫೇಸ್‌ಬುಕ್‌ನ ಮಾಜಿ ಉದ್ಯೋಗಿ ಫ್ರಾನ್ಸಿಸ್ ಹಾಗನ್ ಅವರು ಬಹಿರಂಗಪಡಿಸಿರುವ ದಾಖಲೆಗಳಲ್ಲಿ ಈ ವರದಿಗಳೂ ಇವೆ. ನ್ಯೂಯಾರ್ಕ್ ಟೈಮ್ಸ್ ಈ ವರದಿಗಳನ್ನು ಆಧರಿಸಿ, ಪತ್ರಿಕಾ ವರದಿ ಪ್ರಕಟಿಸಿದೆ. ದ್ವೇಷ ಭಾಷಣ, ಸುಳ್ಳುಸುದ್ದಿಗಳು ಮತ್ತು ಹಿಂಸಾಚಾರದ ಸಂಭ್ರಮವನ್ನು ಫೇಸ್‌ಬುಕ್‌ನ ನಿಯಮಗಳಿಂದ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಈ ವರದಿಯಲ್ಲಿ ಇದೆ.

ಕೆಲವು ಗುಂಪುಗಳು ಅದರಲ್ಲೂ ಪ್ರಧಾನವಾಗಿ ಬಜರಂಗ ದಳವು ಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್‌ಗಳನ್ನು ಮಾಡುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಬಜರಂಗ ದಳವು ಧರ್ಮಾಧಾರಿತ ಹಿಂಸಾಚಾರವನ್ನು ಉದ್ದೀಪಿಸುವ ಕಾರಣ, ಫೇಸ್‌ಬುಕ್ ಅದನ್ನು ಅಪಾಯಕಾರಿ ಸಂಘಟನೆ ಎಂದು ಪರಿಗಣಿಸಿತ್ತು. ಆದರೆ ಭಾರತದಲ್ಲಿ ಫೇಸ್‌ಬುಕ್‌ಗೆ ಹೆಚ್ಚಿನ ಅಧಿಕಾರ ಇಲ್ಲದೇ ಇದ್ದ ಕಾರಣಕ್ಕೆ, ಇಂತಹ ಪೋಸ್ಟ್‌ಗಳ ನಿಯಂತ್ರಣ ಸಾಧ್ಯವಾಗಿರಲಿಲ್ಲ. ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್‌ಗಳು ಹೆಚ್ಚಾಗುತ್ತಿದ್ದ ಕಾಲವದು. ಆದರೆ ಈಗ ಅದನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಫೇಸ್‌ಬುಕ್‌ನ ಆಂತರಿಕ ವರದಿಯಲ್ಲಿ ವಿವರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!