February 1, 2026

ಅಪಾರ್ಟ್‌‌ಮೆಂಟ್‌ಗೆ ಬೆಂಕಿ: 9 ಮಕ್ಕಳು ಸೇರಿದಂತೆ 19 ಮಂದಿ ಮೃತ್ಯು

0
image_editor_output_image-299065075-1641803364946.jpg

ನ್ಯೂಯಾರ್ಕ್‌: ಅಪಾರ್ಟ್‌‌ಮೆಂಟ್‌ವೊಂದಕ್ಕೆ ಬೆಂಕಿ ತಗುಲಿ 9ಮಕ್ಕಳು ಸೇರಿದಂತೆ 19 ಮಂದಿ ಮೃತಪಟ್ಟ ದಾರುಣ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ.

ಈ ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅದರಲ್ಲೂ ಸುಮಾರು 13 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆಯನ್ನು ನ್ಯೂಯಾರ್ಕ್​​ ಸಿಟಿಯ ಮೇಯರ್​ ಎರಿಕ್​ ಆಡಮ್ಸ್​​ರವರ ಹಿರಿಯ ಸಲಹೆಗಾರ ಸ್ಟೆಫನ್​ ರಿಂಜೆಲ್​​ ಖಾತರಿಪಡಿಸಿದ್ದಾರೆ.

ಬ್ರಾಂಕ್ಸ್ ಟ್ವಿನ್ ಪಾರ್ಕ್‌‌ನಲ್ಲಿರುವ 19ನೇ ಅಂತಸ್ತಿನ ಅಪಾರ್ಟ್​ಮೆಂಟ್​ಗೆ, ಬೆಂಕಿ ಬೀಳುತ್ತಿದ್ದಂತೆ ಅಗ್ನಿಶಾಮಕದಳ, ಪೊಲೀಸರು, ರಕ್ಷಣಾ ಅಧಿಕಾರಿಗಳಿಗೆ ಕರೆ ಮಾಡಲಾಗಿದ್ದು, ತಕ್ಷಣ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!