ನನ್ನ ಜೀವಮಾನದಲ್ಲಿ ಎಂದೂ ಆರೋಪಿಗಳಿಗೆ ಸಹಾಯ ಮಾಡಿಲ್ಲ: ಮದುಮಗ ಕೊರಗಜ್ಜ ವೇಷ ಧರಿಸಿದ ಘಟನೆ ಖಂಡನೀಯ: ಯು.ಟಿ ಖಾದರ್
ಸುರತ್ಕಲ್: ನನ್ನ ಜೀವಮಾನದಲ್ಲಿ ಯಾವತ್ತೂ ಅಪರಾಧಿಗೆ ಸಹಾಯ ಮಾಡಿಲ್ಲ. ನನಗೆ ಅಪಪ್ರಚಾರ ಹೊಸದಲ್ಲ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಹೇಳಿದರು.
ಸುರತ್ಕಲ್ ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕೊರಗಜ್ಜ ವೇಷ ಧರಿಸಿ ಮದುಮಗ ಮಾಡಿದ ವಿಚಾರ ಖಂಡನೀಯ. ಯಾವುದೇ ಸಮುದಾಯ ತಾವು ಅರಾಧಿಸುವ ಹಾಗೂ ನಂಬಿಕೆ ಚ್ಯುತಿ ತರುವುದು ತಪ್ಪು. ಈ ಬಗ್ಗೆ ಈಗಾಗಲೇ ಕ್ಷಮೆ ಕೇಳಿದ್ದಾರೆ ಎಂದರು.
ಈಗಿರುವುದು ಬಿಜೆಪಿ ಸರಕಾರ, ಸಂಸದರು, ಶಾಸಕರು ಅವರೇ ಇದ್ದಾರೆ ಹೀಗಿದ್ದೂ ಸಮಸ್ಯೆ ನಿಭಾಯಿಸಲು ಅವರಿಗೆ ಆಗಿಲ್ಲ. ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ನಿಲುವು ಸ್ಪಷ್ಟವಿದೆ. ನಮ್ಮ ಹೋರಾಟ ಯಶಸ್ವಿಯಾಗಿ ಆರಂಭವಾಗಿದೆ. ಕೊರೊನಾ ಕಾರಣ ನೀಡಿ ನಮ್ಮ ಪಾದಯಾತ್ರೆ ತಡೆಯಲು ಸರಕಾರ ಯತ್ನಿಸಿದೆ. ಅವರ ವೈಫಲ್ಯ ಮುಚ್ಚಲು ಈ ತಂತ್ರ ಮಾಡಿದೆ ಎಂದು ಆರೋಪಿಸಿದರು.




