February 4, 2026

ಪ್ರಚೋದನಕಾರಿ ಭಾಷಣ: ಸಂಘಪರಿವಾರದ 200 ಮಂದಿ ವಿರುದ್ಧ ಪ್ರಕರಣ ದಾಖಲು

0
n34798278416415180039598b5521e048976932038f9ded5ca34e18dfbaf8e040ad1e44d649f9892bd093ce.jpg

ಕಣ್ಣೂರು: ಹಿಂದೂ ಐಕ್ಯ ವೇದಿ ಸಂಘಟನೆ, ಇಲ್ಲಿ ಆಯೋಜಿಸಿದ್ದ ಪ್ರತಿಭಟನಾ ರ‍್ಯಾಲಿಯೊಂದರಲ್ಲಿ ಪ್ರಚೋದನಕಾರಿ ಭಾಷಣ ಮತ್ತು ಘೋಷಣೆಗಳನ್ನು ಕೂಗಿದ ಆರೋಪದಡಿ ಸಂಘ ಪರಿವಾರದ ಪ್ರಮುಖ ನಾಯಕ ವಲ್ಸಾನ್‌ ತಿಲಂಕೆರಿ ಸೇರಿದಂತೆ 200 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೇರಳದಲ್ಲಿರುವ ‘ಉಗ್ರಗಾಮಿ ಶಕ್ತಿಗಳ’ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಬುಧವಾರ ಹಿಂದೂ ಐಕ್ಯ ವೇದಿ ಸಂಘಟನೆಯು ಪ್ರತಿಭಟನಾ ರ‍್ಯಾಲಿಯನ್ನು ಆಯೋಜಿಸಿತ್ತು. ಜಿಲ್ಲೆಯ ಬ್ಯಾಂಕ್‌ ರೋಡ್‌ನಿಂದ ಕ್ರೀಡಾಂಗಣವೊಂದರ ತನಕ ಮೆರವಣಿಗೆಯನ್ನು ನಡೆಸಲಾಗಿತ್ತು. ತಿಲಂಕೆರಿ ಈ ಸಂಘಟನೆಯ ಕಾರ್ಯಾಧ್ಯಕ್ಷರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಇತ್ತೀಚಿಗೆ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆಯಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಮತ್ತು ಸೋಷಿಯಲ್‌ ಡೆಮಾಕ್ರಾಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿ‍ಪಿಐ) ಸಂಘಟನೆಯ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನು ಖಂಡಿಸಿ ರಾಜ್ಯದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಬುಧವಾರ ಪ್ರತಿಭಟನಾ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.

Leave a Reply

Your email address will not be published. Required fields are marked *

You may have missed

error: Content is protected !!