ಎಸ್.ಕೆ.ಎಸ್.ಎಸ್.ಎಫ್ ಕೊಡಂಗಾಯಿ ಶಾಖೆಗೆ ನೂತನ ಪದಾಧಿಕಾರಿಗಳ ಆಯ್ಕೆ*
ವಿಟ್ಲ (10-09-2026): ಎಸ್.ಕೆ.ಎಸ್.ಎಸ್.ಎಫ್ ಕೊಡಂಗಾಯಿ ಶಾಖೆಯ ವಾರ್ಷಿಕ ಮಹಾಸಭೆಯು ರಾಧುಕಟ್ಟೆ ಮಸ್ಜಿದ್ ಯಾಸೀನ್ ಶಂಸುಲ್ ಹುದಾ ಮದ್ರಸದಲ್ಲಿ ಜರುಗಿತು.

ಸಮಿತಿಯ ಅಧ್ಯಕ್ಷರಾದ ಹನೀಫ್ ಪಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೆ.ಕೆ. ಇಸ್ಮಾಯಿಲ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮಜೀದ್ ಟಿ.ಎಂ. ವಾರ್ಷಿಕ ವರದಿ ಮಂಡಿಸಿದರು.
ನೂತನ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ವೀಕ್ಷಕರಾಗಿ ಆಗಮಿಸಿದ್ದ ಎಸ್.ಕೆ.ಎಸ್.ಎಸ್.ಎಫ್ ವಿಟ್ಲ ವಲಯಾಧ್ಯಕ್ಷ ಅಶ್ರಫ್ ಕುಂಡಡ್ಕ ಅವರು ಸಂಘಟನೆಯ ಸೇವಾ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಉಮರ್ ದಾರಿಮಿ ಪರ್ತಿಪ್ಪಾಡಿ ಹಾಗೂ ಹಕೀಂ ಮುಸ್ಲಿಯಾರ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಕೆ.ಎಂ.ಎ. ಕೊಡಂಗಾಯಿ ಅವರು ಎಸ್.ಕೆ.ಎಸ್.ಎಸ್.ಎಫ್ ಸಾಧನೆಗಳ ಕುರಿತು ವಿವರಿಸಿದರು.
ಇಬ್ರಾಹಿಂ ಝೈನಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಬ್ದುಲ್ ಮಜೀದ್ ಧನ್ಯವಾದ ಸಮರ್ಪಿಸಿದರು. ಸಮಾರಂಭದಲ್ಲಿ ಸಮಿತಿಯ ಸದಸ್ಯರು ಹಾಗೂ ಸಮಸ್ತ ಅಭಿಮಾನಿಗಳು ಉಪಸ್ಥಿತರಿದ್ದರು.
2026-29ನೇ ಸಾಲಿನ ನೂತನ ಪದಾಧಿಕಾರಿಗಳು:
* ಅಧ್ಯಕ್ಷರು: ಹನೀಫ್ ಪರ್ಲಾರ್
* ಉಪಾಧ್ಯಕ್ಷರು: ಉಮರ್ ಮುಸ್ಲಿಯಾರ್, ಮಜೀದ್ ಇಂದಾದಿ, ಅಲೀಮುಲ್ಲಾ
* ಪ್ರಧಾನ ಕಾರ್ಯದರ್ಶಿ: ಅಬ್ದುಲ್ ಮಜೀದ್ ಟಿ.ಎಂ.
* ಜೊತೆ ಕಾರ್ಯದರ್ಶಿಗಳು: ಹಸೈನಾರ್ ಬಿ., ಇಸ್ಮಾಯಿಲ್ ಸಹೀಮ್, ಇರ್ಫಾನ್
* ವರ್ಕಿಂಗ್ ಸೆಕ್ರೆಟರಿ: ಮುಹಮ್ಮದ್ ಸವಾದ್ ಖವ್ವಾಮಿ ಮೇಲಂಗಡಿ
* ಕೋಶಾಧಿಕಾರಿ: ಹಮೀದ್ ಟಿ.
* ವರ್ಕಿಂಗ್ ಮೆಂಬರ್ಸ್: ರಫೀಕ್ ಪಿ., ರಫೀಕ್ ಎ.ಬಿ., ಕೆ.ಎಂ.ಎ., ಕೆ.ಕೆ. ಇಸ್ಮಾಯಿಲ್ ಅಸ್ನವಿ, ಸವಾದ್ ಪಿ.
* ಕೌನ್ಸಿಲರ್‌ಗಳು: ಕೆ.ಬಿ. ಅಬ್ದುಲ್ ಖಾದರ್ ದಾರಿಮಿ, ಇಬ್ರಾಹಿಂ ಝೈನಿ, ಕೆ.ಕೆ. ಇಸ್ಮಾಯಿಲ್ ಅಸ್ನವಿ, ಕೆ.ಎಂ.ಎ. ಫಾಝಿಲ್ ಹನೀಫಿ, ಹಾರಿಸ್ ಎಸ್.ಕೆ., ಅಬ್ದುಲ್ ಗಫೂರ್ ಹನೀಫಿ, ಎ.ಎಂ. ಮಹಮ್ಮದ್ ಕುಂಞ, ಉಮರ್ ಮುಸ್ಲಿಯಾರ್, ಹಸನ್ ಬಿ.
* ಮೀಡಿಯಾ ವಿಂಗ್: ಅಬ್ದುಲ್ ಖಾದ್ರಿ ಕೆ., ಹಸೈನಾರ್ ಟಿ.ಎಂ.





