ಗಲ್ಫ್ ಗೈಸ್ ಬಡಕಬೈಲ್* ಸಂಘಟನೆಗೆ ಹೊಸ ಸಾರಥ್ಯ
ಬಡಕಬೈಲ್: ಜಮಾಅತಿನ ಶ್ರೇಯೋಭಿವೃದ್ಧಿಯನ್ನು ಮುಖ್ಯ ಧ್ಯೇಯವಾಗಿಸಿಕೊಂಡು, ಅದರ ಭಾಗವಾಗಿ ನಾಡಿನ ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರಗಳಾದ ಬದ್ರಿಯಾ ಜುಮಾ ಮಸ್ಜಿದ್ ಹಾಗೂ ಜಲಾಲಿಯಾ ಮದ್ರಸದ ಉನ್ನತಿಯನ್ನು ಧ್ಯೇಯವಾಗಿರಿಸಿಕೊಂಡು ಕಾರ್ಯಾಚರಿಸುತ್ತಿರುವ ಸಂಘಟನೆಯಾಗಿದೆ ಗಲ್ಫ್ ಗೈಸ್ ಬಡಕಬೈಲ್.
ಕಳೆದ ಸುಮಾರು 9 ವರ್ಷಗಳಿಂದ ಸೇವಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಈ ಸಂಘಟನೆ, ಜಮಾಅತಿನ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುತ್ತಾ ಹಲವು ರೀತಿಯ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.
ಮಸೀದಿ ಮತ್ತು ಮದ್ರಸಗಳಿಗೆ ಅಗತ್ಯವಿರುವ ವಿವಿಧ ಸೌಲಭ್ಯಗಳಿಗೆ ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಸಹಕಾರ ನೀಡುವುದರ ಜೊತೆಗೆ, ಜಮಾಅತಿಗೆ ಒಳಪಟ್ಟ ಬಡ ಕುಟುಂಬಗಳ ಹೆಣ್ಣುಮಕ್ಕಳ ವಿವಾಹ ಕಾರ್ಯಗಳಿಗೆ ಹಾಗೂ ತುರ್ತು ಚಿಕಿತ್ಸಾ ಅಗತ್ಯಗಳಿಗೆ ನೆರವು ನೀಡುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲಿಯೂ ಸಂಘಟನೆ ವಿಶೇಷ ಗಮನ ಹರಿಸುತ್ತಿದೆ. ಪ್ರತಿವರ್ಷ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಸ್ಕಾಲರ್‌ಶಿಪ್ ವಿತರಿಸುವ ಮೂಲಕ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದೆ.
ಇಂತಹ ಸಮಾಜಮುಖಿ ಸೇವಾ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿರುವ *ಗಲ್ಫ್ ಗೈಸ್ ಬಡಕಬೈಲ್* ಸಂಘಟನೆಯ ವಾರ್ಷಿಕ ಮಹಾಸಭೆಯು 2026ರ ಸೆಪ್ಟೆಂಬರ್ 4ರಂದು ಶುಕ್ರವಾರ, ಜುಮಾ ನಮಾಝ್ ಬಳಿಕ ಭಾರತೀಯ ಕಾಲಮಾನ ಸಂಜೆ 4:30ಕ್ಕೆ, ಅಧ್ಯಕ್ಷರಾದ ಅಶ್ರಫ್ ದುಬೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಮಿಟಿಯ ಗೌರವಾಧ್ಯಕ್ಷರಾದ ಬಹುಮಾನ್ಯ ಅಶ್ರಫ್ ಮದನಿ ಗಾಣೆಮಾರ್ ಅವರ ದುಆದೊಂದಿಗೆ ಮಹಾಸಭೆಗೆ ಚಾಲನೆ ನೀಡಲಾಯಿತು. ಬಹುಮಾನ್ಯ ಹಾಫಿಳ್ ಹೈದರ್ ಫಾಳಿಲಿ ಸಭೆಯನ್ನು ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ತೌಹೀದ್ ಗಾಣೆಮಾರ್ ಸ್ವಾಗತಿಸಿದರು.
ನಂತರ ನಡೆದ ಚುನಾವಣೆಯಲ್ಲಿ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಹಾಮದ್ ಬಾವ ದಮ್ಮಾಮ್ ಹಾಗೂ ಅಧ್ಯಕ್ಷರಾಗಿ ಅಶ್ರಫ್ ಮದನಿ ರಿಯಾದ್ ಅವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಕೋಶಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ಬಹುಮತದ ಮೂಲಕ ಆಯ್ಕೆ ಮಾಡಲಾಯಿತು.
ಮಹಾಸಭೆಯ ಉಸ್ತುವಾರಿಗಳಾದ ಮುನಾಫ್ ಹಾಗೂ ಅಝ್ವೀರ್ ಗಾಣೆಮಾರ್ ಅವರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಕೊನೆಯಲ್ಲಿ ನೂತನ ಕಾರ್ಯದರ್ಶಿ ನಝೀರ್ ಗಾಣೆಮಾರ್ ಧನ್ಯವಾದ ಅರ್ಪಿಸಿದರು.
ನೂತನ ಸಾರಥ್ಯದೊಂದಿಗೆ ಗಲ್ಫ್ ಗೈಸ್ ಬಡಕಬೈಲ್ ಇನ್ನಷ್ಟು ಶಕ್ತವಾಗಿ ಜಮಾಅತಿನ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ತನ್ನ ಸೇವೆಯನ್ನು ಮುಂದುವರಿಸುವ ನಿರೀಕ್ಷೆಯಿದೆ.
ವರದಿ : *ಮೀಡಿಯಾ ವಿಂಗ್, ಗಲ್ಫ್ ಗೈಸ್ ಬಡಕಬೈಲ್*
*12 ಸೆಪ್ಟೆಂಬರ್ 2026*





