September 14, 2026

ರಾಜ್ಯಮಟ್ಟದ ಸಾಹಿತ್ಯೋತ್ಸವ 2026: ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಉಕ್ಕುಡ ಮುತಅಲ್ಲಿಮರಿಗೆ ಊರವರಿಂದ ಸನ್ಮಾನ ಕಾರ್ಯಕ್ರಮ

0
image_editor_output_image-1529657355-1789303115049

ಉಕ್ಕುಡ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ನಡೆದ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಉಕ್ಕುಡ ಮುತಅಲ್ಲಿಮರು ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ದಾಖಲಿಸಿದ್ದಾರೆ. ಕಿತಾಬ್, ಭಾಷಣ, ಕವನವಾಚನ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳನ್ನು ಪಡೆದು ಉಕ್ಕುಡದ ಶೈಕ್ಷಣಿಕ ಹಾಗೂ ಸಾಹಿತ್ಯಿಕ ಪ್ರತಿಭೆಯನ್ನು ರಾಜ್ಯ ಮಟ್ಟದಲ್ಲಿ ಮತ್ತೊಮ್ಮೆ ಪರಿಚಯಿಸಿದ್ದಾರೆ.

ಎರಡು ಕಿತಾಬ್ ಸ್ಪರ್ಧೆಗಳಲ್ಲೂ ಉಕ್ಕುಡಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಫತುಹುಲ್ ಮುಈನ್ ಸ್ಪರ್ಧೆಯಲ್ಲಿ ಮುಸ್ತಫಾ ಉಜಿರೆಬೆಟ್ಟು ಪ್ರಥಮ ಸ್ಥಾನ ಪಡೆದರೆ, ಅಲ್ಫಿಯಾ ಬೈತ್ ಸ್ಪರ್ಧೆಯಲ್ಲಿ ಶೈಖ್ ಸನಾವುಲ್ಲಾಹ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ

ಸೀನಿಯರ್ ಹಾಗೂ ಜೂನಿಯರ್ ವಿಭಾಗಗಳ ಕನ್ನಡ ಭಾಷಣ, ಇಂಗ್ಲಿಷ್ ಭಾಷಣ ಮತ್ತು ಕನ್ನಡ ಕವನವಾಚನ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಉಕ್ಕುಡದ ಮುತಅಲ್ಲಿಮರು ಪ್ರಥಮ ಸ್ಥಾನ ಸೇರಿದಂತೆ ಹಲವು ಪ್ರಮುಖ ಸಾಧನೆಗಳನ್ನು ದಾಖಲಿಸಿದ್ದಾರೆ.ಸಹ್ಲ್ ಉಕ್ಕುಡ ,ಅಕ್ತರ್ ಹಾಸನ,ಅಕ್ರಂ ಮೂಡಬಿದ್ರೆ,ಸಯ್ಯಿದ್ ಸಾಬಿತ್ ತಂಙಳ್ ಶಿವಮೊಗ್ಗ,ಅಫ್ರೀದ್ ಹಾಸನ,ಅನ್ವರ್ ಮುಡಿಪು,ನಿಝಾಂ ಹಾಸನ,ಶಕೂರ್ ಮುಡಿಪು,ಫಾಝಿಲ್ ಕಾರ್ಕಳ ಇವರು ಪ್ರಮುಖರು. ಮದರಸ ವಿದ್ಯಾರ್ಥಿಗಳಾದ ರಈಸ್ ಅಬ್ದುಲ್ಲಾಹ್, ಮರಿಯಂ ಶೈಮ, ನಸ್ರೀನ ಗಮನಾರ್ಹ ಸಾಧನೆ ಮಾಡಿದ್ದಾರೆ.

ಈ ಬಾರಿಯ ಸಾಹಿತ್ಯೋತ್ಸವದಲ್ಲಿ ಸವಾದ್ ಚಿಕ್ಕಮಂಗಳೂರು ಅವರು ರಾಜ್ಯ, ಜಿಲ್ಲಾ ಹಾಗೂ ಡಿವಿಷನ್ ಹಂತಗಳಲ್ಲೂ ‘ಸ್ಟಾರ್ ಆಫ್ ದಿ ಫೆಸ್ಟ್’ ಗೌರವಕ್ಕೆ ಪಾತ್ರರಾಗಿರುವುದು ವಿಶೇಷ. ಇದೇ ರೀತಿ ಮುಆಝ್ ಕುಂಬ್ರ ಅವರು ಸೆಕ್ಟರ್, ಡಿವಿಷನ್ ಹಾಗೂ ಜಿಲ್ಲಾಮಟ್ಟದಲ್ಲೂ ‘ಸ್ಟಾರ್ ಆಫ್ ದಿ ಫೆಸ್ಟ್’ ಆಗಿ ಹೊರಹೊಮ್ಮಿದ್ದಾರೆ.

ವಿವಿಧ ಹಂತಗಳಲ್ಲಿ ತಮ್ಮ ಪ್ರತಿಭೆಯನ್ನು ಸಮರ್ಥವಾಗಿ ಪ್ರದರ್ಶಿಸಿ ಉಕ್ಕುಡದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದ ಎಲ್ಲಾ ಮುತಅಲ್ಲಿಮರ ಸಾಧನೆಗೆ ಬದ್ರಿಯಾ ಜಮಾತ್ ಕಮಿಟಿ,ಮುರ್ಷಿದುಲ್ ಅನಾಂ ಸ್ವಲಾತ್ ಕಮಿಟಿ,ನೂರುಲ್ ಹುದಾ ಮದರಸ ಅಭಿವೃದ್ಧಿ ಸಮಿತಿ, ಎನ್‌ಆರ್‌ಐ ಸಮಿತಿ, ಹಿದಾಯ ಫ್ರೆಂಡ್ಸ್ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಮುದರ್ರಿಸರಾದ ಹಾಫಿಳ್ ಮಳಲಿ ಉಸ್ತಾದರು, ಜಮಾತ್ ಅಧ್ಯಕ್ಷರಾದ ಬದ್ರುಲ್ ಮುನೀರ್, ಕಾರ್ಯದರ್ಶಿ ಅಲಿ ನೆಕ್ಕರೆಕಾಡು, ಕೋಶಾಧಿಕಾರಿ ಮುಹಮ್ಮದ್ ಟಾಪ್ ಕೋ, ಮದರಸ ಪ್ರಧಾನ ಅಧ್ಯಾಪಕರಾದ ಯಾಸಿನ್ ಸ‌ಅದಿ, ಸಹಧ್ಯಾಪಕರಾದ ಸಫ್ವಾನ್ ಸ‌ಅದಿ, ಹೈದರ್ ಅಲಿ ಸಖಾಫಿ ಸೇರಿದಂತೆ ನಾಡಿನ ಹಿರಿಯ ನಾಗರಿಕರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!