ಸುಳ್ಯ: ರಸ್ತೆ ದಾಟುತ್ತಿದ್ದ ವೃದ್ದರಿಗೆ ಕಾರು ಢಿಕ್ಕಿ: ಗಂಭೀರ ಗಾಯ
ಸುಳ್ಯ: ಅರಂತೋಡು ಪುಡ್ ಪಾಯಿಂಡ್ ಹೋಟೆಲ್ ಮುಂಭಾಗ ರಸ್ತೆ ದಾಟುತ್ತಿದ್ದ ವೃದ್ದರೊರ್ವರಿಗೆ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಸೆ.12ರಂದು ನಡೆದಿದೆ.
ಕಾರು ಡಿಕ್ಕಿ ಹೊಡೆದು ಗಾಯಗೊಂಡ ವ್ಯಕ್ತಿಯನ್ನು ಅರಂತೋಡು ಬಿಳಿಯಾರು ಗ್ರಾಮದ ಬಿಳಿಯಾರು ಶೆಟ್ಡಿಯಡ್ಕ ನಿವಾಸಿ ಮುಸ್ತಾಪ ಎಂದು ಗುರುತಿಸಲಾಗಿದೆ.
ಸುಳ್ಯದಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರು ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ರಭಸದಲ್ಲಿ ವಿರುದ್ಧ ದಿಕ್ಕಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪಾದಯಾರಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಇನ್ನು ಗಾಯಗೊಂಡ ವೃದ್ದರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.





