October 31, 2026

ಮಂಡ್ಯ: ವಿದ್ಯಾರ್ಥಿನಿಯರಿಗೆ ‘I Love You’ ಮೆಸೇಜ್ ಕಳಿಸುತ್ತಿದ್ದ  ಶಿಕ್ಷಕನಿಗೆ ಧರ್ಮದೇಟು

0
image_editor_output_image1494933893-1793388744127

ಮಂಡ್ಯ: ವಿದ್ಯಾರ್ಥಿನಿಯರಿಗೆ ಮೊಬೈಲ್ ಮೂಲಕ ಅಸಭ್ಯ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರು ಧರ್ಮದೇಟು ನೀಡಿ, ತಕ್ಕ ಪಾಠ ಕಲಿಸಿರುವ ಘಟನೆ ನಾಗಮಂಗಲ-ಮಂಡ್ಯ ರಸ್ತೆಯ ಪದವಿ ಕಾಲೇಜಿನಲ್ಲಿ ನಡೆದಿದೆ.

ಕಾಲೇಜಿನ ಉಪನ್ಯಾಸಕ ಗಂಗೂ ಎಂಬಾತ ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಆರೋಪಿ ಉಪನ್ಯಾಸಕ ಗಂಗೂ, ಕಾಲೇಜಿನ ವಿದ್ಯಾರ್ಥಿನಿಯರ ಮೊಬೈಲ್ ನಂಬರ್‌ಗಳನ್ನು ಪಡೆದುಕೊಂಡು ಅವರಿಗೆ ನಿರಂತರವಾಗಿ ಚಾಟಿಂಗ್ ಮಾಡುತ್ತಿದ್ದ. ಅಷ್ಟೇ ಅಲ್ಲದೆ, ಚಾಟಿಂಗ್‌ನಲ್ಲಿ ʼಐ ಲವ್‌ ಯೂ, ಐ ಲೈಕ್‌ ಯೂʼ ಎಂದೆಲ್ಲಾ ಬರೆಯುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!