October 31, 2026

ಹೆಲಿಕಾಪ್ಟರ್ ಪತನ: ಬೆಂಗಳೂರಿನ CCB ಇನ್ಸ್‌ಪೆಕ್ಟರ್ ಸೇರಿ ಐವರು ಕನ್ನಡಿಗರು ಸಾವು

77ef6641-1601-45fb-bf0f-13a2594d0cae

ಡೆಹ್ರಾಡೂನ್/ಬೆಂಗಳೂರು: ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪದ ಹಾಥಿ ಕಣಿವೆ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಭೀಕರ ಹೆಲಿಕಾಪ್ಟ‌ರ್ ಅಪಘಾತ ಸಂಭವಿಸಿದ್ದು, ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಕರ್ನಾಟಕದ ಐವರು ಹಾಗೂ ದೆಹಲಿ ಮೂಲದ ಪೈಲಟ್ ಸೇರಿ ಬರೋಬ್ಬರಿ ಆರು ಜನರು ದುರ್ಮರಣ ಹೊಂದಿದ್ದಾರೆ. ಹಾಥಿ ಕಣಿವೆಯ ಚೈನ್ ಗ್ರಾಮದ ಬಳಿ ಪತನಗೊಂಡ ಹೆಲಿಕಾಪ್ಟ‌ರ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಮೃತದೇಹಗಳು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ರಕ್ಷಣಾ ಪಡೆಗಳು ಹಾಗೂ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಮೃತಪಟ್ಟವರನ್ನು ವಿಮಾನದ ಪೈಲಟ್ ಹಾಗೂ ಚಾರ್ ಧಾಮ್ ಪ್ರವಾಸದಲ್ಲಿದ್ದ ಕನ್ನಡಿಗ ಸ್ನೇಹಿತರ ತಂಡ ಎಂದು ಗುರುತಿಸಲಾಗಿದೆ.

ಕ್ಯಾಪ್ಟನ್ ಹಿಮಾಂಶು ಸಬರ್ವಾಲ್ (48): ದೆಹಲಿ ಮೂಲದ ಹೆಲಿಕಾಪ್ಟರ್ ಪೈಲಟ್.
ಅರುಣ್ ಸಾಲಂಕೆ (44): ಬೆಂಗಳೂರಿನ ಸಿಸಿಬಿ (CCB) ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್.
ವಿ.ಬಿ. ಶಂಕರ್‌ಗೌಡ (39): ತುಮಕೂರು ಮೂಲದ ಹೈಕೋರ್ಟ್ ಹಿರಿಯ ವಕೀಲ
ಬಾಚಿಹಳ್ಳಿ ಪ್ರತಾಪ್ ಗೌಡ (49): ಹಾಸನ ಜಿಲ್ಲೆಯ ಬಾಚಿಹಳ್ಳಿ ಮೂಲದ ಬೆಂಗಳೂರಿನ ಉದ್ಯಮಿ ಹಾಗೂ ಪ್ರಭಾವಿ ಸಮಾಜ ಸೇವಕ
ಹೆಚ್.ಎನ್. ನಟರಾಜು (51): ತುಮಕೂರು ಜಿಲ್ಲೆ ಹುಲಿಯೂರುದುರ್ಗದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ.
ಸುಧೀರ್: ಬೆಂಗಳೂರಿನ ವಕೀಲ.

ಇವರೆಲ್ಲರೂ ಒಟ್ಟಾಗಿ ನಾಲ್ಕು ದಿನಗಳ ಹಿಂದೆಯಷ್ಟೇ ದೇವಭೂಮಿ ಉತ್ತರಾಖಂಡಕ್ಕೆ ಸುದೀರ್ಘ ಧಾರ್ಮಿಕ ಪ್ರವಾಸ ಕೈಗೊಂಡಿದ್ದರು.

error: Content is protected !!