October 31, 2026

ಪುತ್ತೂರು: ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಮೃತ್ಯು

0
image_editor_output_image42739435-1793388341132

ಪುತ್ತೂರು: ಅಸ್ವಸ್ಥತೆಯಿಂದ ಬಳಲುತ್ತಿದ್ದ ಆಸ್ಟಿನ್ ಎಂಬ ಮಗು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಆಸ್ಟಿನ್‌ನನ್ನು ಅಕ್ಟೋಬರ್ 28ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು ಎನ್ನಲಾಗಿದೆ. ಚಿಕಿತ್ಸೆ ಬಳಿಕ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮನೆಗೆ ಕರೆತರಲಾಗಿತ್ತು.

ಆದರೆ, ಮರುದಿನ ಮುಂಜಾನೆ ಎಂದಿನಂತೆ ಎದ್ದು ಕೆಲಕಾಲ ಆಟವಾಡುತ್ತಿದ್ದ ಮಗು, ಸ್ವಲ್ಪ ಹೊತ್ತಿನಲ್ಲೇ ದಿಢೀರ್ ಅಸ್ವಸ್ಥಗೊಂಡು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ. ಎಳೆಯ ವಯಸ್ಸಿನಲ್ಲೇ ಕಂದಮ್ಮನನ್ನು ಕಳೆದುಕೊಂಡ ಕುಟುಂಬದವರ ದುಃಖ ಹೇಳತೀರದಾಗಿದೆ. ಪುಟ್ಟ ಮಗುವಿನ ಅಕಾಲಿಕ ನಿಧನ ಸ್ಥಳೀಯರಲ್ಲೂ ತೀವ್ರ ಶೋಕ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!