ಕಂದಕಕ್ಕೆ ಬಿದ್ದ ಶಾಲಾ ಬಸ್: 25 ಮಂದಿ ಮೃತ್ಯು
ಕೇಪ್ ವರ್ದೆ: ಫೋಗೋ ದ್ವೀಪದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ 25 ಮಂದಿ ಮೃತಪಟ್ಟರು ಎಂದು ಅಲ್ಲಿನ ಸಾರ್ವಜನಿಕ ರೇಡಿಯೋ ಭಾನುವಾರ ತಿಳಿಸಿದೆ.
ಶನಿವಾರದಂದು ಶಾಲಾ ಮಕ್ಕಳನ್ನು ಪ್ರವಾಸಕ್ಕೆಂದು ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. 32 ಪ್ರಯಾಣಿಕರಿದ್ದ ಬಸ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ.
ಈ ವೇಳೆ ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳ ರಕ್ಷಣೆಗೆ ರಾತ್ರಿಯಿಡೀ ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಮೃತರ ಪೈಕಿ ಬಸ್ ಚಾಲಕನೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





