ವಿಟ್ಲ: ಲೋಕ ತಂತ್ರ ಬಚಾವೋ ಆಂದೋಲನ ಸಮಿತಿ ವಿಟ್ಲ ವತಿಯಿಂದ ಎಸ್ಐಆರ್ ವಿರುದ್ಧ ಪ್ರತಿಭಟನಾ ಸಭೆ
ವಿಟ್ಲ: ಲೋಕ ತಂತ್ರ ಬಚಾವೋ ಆಂದೋಲನ ಸಮಿತಿ ವಿಟ್ಲ ವತಿಯಿಂದ ಎಸ್ಐಆರ್ ವಿರುದ್ಧ ಪ್ರತಿಭಟನಾ ಸಭೆ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ನಡೆಯಿತು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಕಾರ್ಯದರ್ಶಿ ಮುನೀರ್ ಪದರಂಗಿ ಮಾತನಾಡಿ ಮತಕಳ್ಳತನದ ಮೂಲಕ ಅಧಿಕಾರ ವನ್ನು ಕೇಂದ್ರ ಸರ್ಕಾರ ಕಬಳಿಸುತ್ತಿದೆ. ಇದೇ ಮೊದಲಲ್ಲ ಈ ಹಿಂದೆಯೂ ಇದೇ ರೀತಿ ತನಗೆ ಗೆಲುವು ಕಷ್ಟ ವಾಗುವ ಕಡೆ ಇದನ್ನು ಬಳಸಿಕೊಂಡು ಬಿಜೆಪಿ ಅಧಿಕಾರವನ್ನು ಪಡೆದಿದೆ ಎಂದರು.
ಸಿಪಿಐ ಮುಖಂಡ ಬಿ.ಎಂ.ಹಸೈನಾರ್ ಮಾತನಾಡಿ ಪ್ರಜಾಪ್ರಭುತ್ವದ ಹಕ್ಕನ್ನು ದಮನಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜಿನಾಮೆ ನೀಡಬೇಕು. ಇದರ ವಿರುದ್ಧ ಜನಜಾಗೃತಿ ನಡೆಯಬೇಕಿದೆ ಎಂದು ಕರೆ ನೀಡಿದರು.
ವೆಲ್ಫೀರ್ ಪಾರ್ಟಿ ಜಿಲ್ಲಾಧ್ಯಕ್ಷ ದಿನಕರ ರಾವ್, ರಾಜ್ಯ ಕೋಶಾಧಿಕಾರಿ ಅಬ್ದುಲ್ಲ ಸಲೀಂ ಸಿ.ಎಚ್, ಕೊಳ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ವೆಲ್ ಪೇರ್ ಪಾರ್ಟಿ ಇದರ ಜಿಲ್ಲಾ ಕಾರ್ಯದರ್ಶಿ ಮುನೀರ್ ಪದರಂಗಿ, ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ,
ಕಾಂಗ್ರೆಸ್ ಮುಖಂಡ ರಮಾನಾಥ ವಿಟ್ಲ,
ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಶಾಕೀರ್ ಅಳಕೆಮಜಲು, ಆಸುರಾ ಬೀಬಿ, ಇಕ್ಬಾಲ್ ಹಳೇಮನೆ,
ರಾಮಮುಗೇರ, ಸೀತಾರಾಮ, ಆನಂದ, ಹಸೈನಾರ್ ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ಸಾಹುಲ್ ಹಮೀದ್ ಕನ್ಯಾನ, ಮಹಮ್ಮದ್ ಇಕ್ಬಾಲ್ ನೀರ್ಕಜೆ, ಯಾಸೀನ್ ಬೇಗ್, ರಾಬಿಯಾ ರಹಿಮಾನ್, ಹಸೈನಾರ್ ತಾಳಿತ್ತನೂಜಿ, ವಿಕೆಎಂ ಅಶ್ರಫ್, ಕೆ.ಚ್ ನೆಬಿಸಾ ವಿಟ್ಲ ಪಡ್ನೂರು ಉಪಸ್ಥಿತರಿದ್ದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಅಬ್ದುಲ್ ಖಾದರ್ ಕಾರ್ಯಕ್ರಮ ನಿರೂಪಿಸಿದರು. ಸಲೀಮ್ ಬೋಳಂಗಡಿ ವಂದಿಸಿದರು.




