ದೊಣ್ಣೆಯಿಂದ ಹೊಡೆದು ವ್ಯಕ್ತಿಯ ಕೊಲೆ
ಆನೇಕಲ್: ದಸರಾ ಜಂಬೂಸವಾರಿ ದಿನವೇ ಆನೇಕಲ್ ಪಟ್ಟಣದ ಚಿಕ್ಕಕೆರೆ ಸ್ಟೇಡಿಯಂ ಬಳಿ ರಕ್ತದೋಕುಳಿಯಾಗಿದೆ. ದೊಣ್ಣೆಯಿಂದ ಹೊಡೆದು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ತಮಿಳುನಾಡಿನ ಸಾರಕ್ಕಪಲ್ಲಿ ಗ್ರಾಮದ ಯಲ್ಲಪ್ಪ (56) ಕೊಲೆಯಾದ ವ್ಯಕ್ತಿ. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ನಿನ್ನೇ ದಸರಾ ಜಂಬೂ ಸವಾರಿ ನೋಡಲು ಬಂದಿದ್ದ ಯಲ್ಲಪ್ಪ. ದಸರಾ ಅಂಬಾರಿ ನೋಡಲು ಬಂದಿರೋದಾಗಿ ಪತ್ನಿಗೆ ಪೋನ್ ಮಾಡಿ ಹೇಳಿದ್ದ. ರಾತ್ರಿ ಚಿಕ್ಕಕೆರೆ ಸ್ಟೇಡಿಯಂನಲ್ಲಿ ಕುಡಿಯಲು ಹೋದಾಗ ಗಲಾಟೆಯಾಗಿರುವ ಶಂಕೆ ವ್ಯಕ್ತವಾಗಿದೆ. ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.



