September 3, 2026

ಪುತ್ತೂರು: ಪ್ರೆಸ್ ಕ್ಲಬ್ ಬಳಿ ಘರ್ಷಣೆ ಹಿನ್ನೆಲೆ: ಹಕೀಮ್ ದೂರಿನಂತೆ ನಾಸೀರ್ ಕೋಲ್ಪೆ, ಉದಯ ಪಾಟಾಲಿ, ಜುನೈದ್ ಸೇರಿದಂತೆ ಇತರರ  ವಿರುದ್ಧ ಪ್ರಕರಣ ದಾಖಲು

0
image_editor_output_image-710931788-1788313017510

Oplus_16908288

ಪುತ್ತೂರು: ಇಲ್ಲಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಹಕೀಂ ಎಂಬವರ ದೂರಿನಲ್ಲಿ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಕೆಮ್ಮಿಂಜೆ ನಿವಾಸಿ ಅಬ್ದುಲ್ ಹಕೀಂ ಎಂಬವರ ದೂರಿನಂತೆ, ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾಗಿದ್ದು, ಸದ್ರಿಯವರ ಬಗ್ಗೆ ಮಾಡಲಾಗಿರುವ ಕೆಲವು ಅಪಾದನೆಗಳ ಬಗ್ಗೆ ಸ್ಪಷ್ಟನೆ ಕೊಡುವ ಸಲುವಾಗಿ ದಿನಾಂಕ : 01-09-2026 ರಂದು ಮಧ್ಯಾಹ್ನ ಪತ್ರಿಕಾ ಗೋಷ್ಠಿ ನಡೆಸಲು ನಿರ್ಧರಿಸಿ ಪುತ್ತೂರಿನ ಪ್ರಸ್ ಕ್ಲಬ್ ಗೆ ಬಂದಿದ್ದರು.

ಆರೋಪಿಗಳಾದ ಉದಯ ಪಾಟಾಳಿ, ಜುನೈದ ಬಿಜಿ, ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ, ಹಕೀಮ, ಬೋಲ್ವಾರು, ಮೋನು ಬಪ್ಪಳಿಗೆ, ನಾಶಿರ್ ಕೊಲ್ಪೆ, ಪ್ರವೀನ್ ಆಚಾರ್ಯ, ಇತರರು ಸೇರಿ ಹಕೀಂ ಅವರನ್ನು ತಳ್ಳಾಡಿ, ಅವ್ಯಾಚವಾಗಿ ನಿಂದಿಸಿ, ಜೀವಬೆದರಿಕೆ ಒಡ್ಡಿರುತ್ತಾರೆ. ಬಳಿಕ ಪ್ರಸ್ ಕ್ಲಬ್ ಒಳಗೆ ಹೋಗಿದ್ದ ಹಕೀಂ ಹಿಂತಿರುಗಿ ಹೊರಗೆ ಬರದಂತೆ ಅಕ್ರಮವಾಗಿ ತಡೆದಿರುತ್ತಾರೆ ಎಂದು ಆರೋಪಿಸಲಾಗಿದೆ.

ಆರೋಪಿಗಳ ತಳ್ಳಾಟದಿಂದಾದ ನೋವಿಗಾಗಿ ಚಿಕಿತ್ಸೆ ಪಡೆಯಲು ಹಕೀಮ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ : 105/2026 ಕಲಂ : 127(2), 351(1), 351(2),351(3),352, 115r/w3(5) ರಂತೆ ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!