ವಿಟ್ಲ: ಕೆಲಿಂಜ ಮಸೀದಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಉಚಿತ ಲೈಟಿಂಗ್ಸ್ ವ್ಯವಸ್ಥೆ ಮಾಡುವ ಮುನ್ನ ಅವರಿಗೆ ಸನ್ಮಾನ
ವಿಟ್ಲ: ಕೆಲಿಂಜ ಮದರಸ ಕಮಿಟಿ ವತಿಯಿಂದ ನಡೆದ ಈದ್ ಮೀಲಾದ್ ಕಾರ್ಯಕ್ರಮದಲ್ಲಿ ಕೆಲಿಂಜದಲ್ಲಿ ಪ್ರತಿ ತಿಂಗಳು ನಡೆಯುವ ಮಜ್ಲಿಸುನ್ನೂರ್ ಮತ್ತು ಇತರ ಕಾರ್ಯಕ್ರಮಗಳಿಗೆ ಧ್ವನಿ ವರ್ಧಕ ಮತ್ತು ವಿದ್ಯುತ್ ದೀಪಗಳನ್ನು ಉಚಿತವಾಗಿ ನೀಡುತ್ತಿರುವ ಮುನ್ನ ಲೈಟಿಂಗ್ಸ್ ಮತ್ತು ಸೌಂಡ್ಸ್ ಮಾಲಿಕರಾದ ಮುನ್ನರವರನ್ನು ಕೆಲಿಂಜ ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು.
ಮಸೀದಿ ಖತೀಬರಾದ ಅಬ್ಬಾಸ್ ದಾರಿಮಿ ಮತ್ತು ಜಮಾಅತ್ ಅಧ್ಯಕ್ಷರಾರ ಅಬ್ದುಲ್ ಕರೀಂ ಕಂಪದಬೈಲು ಶಾಲುಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮದರಸ ಕಮಿಟಿ ಅಧ್ಯಕ್ಷರಾದ ಅಶ್ರಫ್,ಕಾರ್ಯದರ್ಶಿ ರಿಯಾದ್,ಜಮಾಅತ್ ಕಾರ್ಯದರ್ಶಿ ಇಸ್ಮಾಯಿಲ್’ಮುನ್ನ, ಖುತುಬಿಯತ್ ಕಮಿಟಿ ಅಧ್ಯಕ್ಷರಾದ ಉಮರ್,ಗುಳಿಗದ್ದೆ ಉಸ್ತಾದರುಗಳಾದ ಶರೀಫ್ ಫೈಝಿ,ಶಾಹುಲ್ ಹಮೀದ್ ಮೌಲವಿ ಝಕರಿಯ್ಯಾ ಮೌಲವಿ ಮೊದಲಾದವರು ಉಪಸ್ಥಿತರಿದ್ದರು