ಬೆಳ್ತಂಗಡಿ: ಎರಡು ರಬ್ಬರ್ ಸ್ಮೋಕ್ ಹೌಸ್ ಕಟ್ಟಡ ಬೆಂಕಿಗಾಹುತಿ
ಬೆಳ್ತಂಗಡಿ: ಎರಡು ರಬ್ಬರ್ ಸ್ಮೋಕ್ ಹೌಸ್ ಕಟ್ಟಡವು ಬೆಂಕಿ ಅವಘಡದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರು 5-6 ಲಕ್ಷ ರೂಪಾಯಿವರೆಗೆ ನಷ್ಟ ಉಂಟಾದ ಘಟನೆ ಧರ್ಮಸ್ಥಳ ಗ್ರಾಮದ ಪೊಸೊಳಿಕೆ ಎಂಬಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.
ಸ್ಥಳೀಯ ನಿವಾಸಿ ಪಿ.ಕೆ. ಜೋಬ್ ಅವರಿಗೆ ಸೇರಿದ ಈ ಎರಡು ಸ್ಮೋಕ್ ಹೌಸ್ ಗಳಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದರೂ, ಎರಡೂ ಕಟ್ಟಡಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.
ಈ ಎರಡು ಸ್ಮೋಕ್ ಹೌಸ್ ಗಳು ಮನೆಯ ಸಮೀಪದಲ್ಲೇ ಇದ್ದವು.
ಆಕಸ್ಮಿಕವಾಗಿ ಸಂಭವಿಸಿದ ಬೆಂಕಿಯಿಂದ ಎರಡೂ ಕಟ್ಟಡಗಳಿಗೆ ವ್ಯಾಪಕ ಹಾನಿಯಾಗಿದ್ದು, ಒಣಗಿಸಲು ಇರಿಸಲಾಗಿದ್ದ ರಬ್ಬರ್ ಶೀಟ್‌ಗಳು ಹಾಗೂ ಕಟ್ಟಡಗಳಲ್ಲಿ ಸಂಗ್ರಹಿಸಿಟ್ಟಿದ್ದ ಮರದ ದಿಮ್ಮಿಗಳು ಸಂಪೂರ್ಣ ಸುಟ್ಟುಹೋಗಿವೆ.
ಘಟನೆಯಿಂದ ಸುಮಾರು 5-6 ಲಕ್ಷ ರೂಪಾಯಿವರೆಗೆ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.





