August 30, 2026

ಮುಸ್ಲಿಮರಿಲ್ಲದ ಭಾರತ ಬಯಸುವವನು ನಿಜವಾದ ಹಿಂದೂ ಅಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದನೆ

0
20250806029L

ವಾಷಿಂಗ್ಟನ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ನ್ಯೂಯಾರ್ಕ್‌ನಲ್ಲಿ ನಡೆದ ಸರ್ವಧರ್ಮ ಸಂವಾದದಲ್ಲಿ ಭಾಗವಹಿಸಿ, ವಿವಿಧ ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ ಕುರಿತು ಮಾತನಾಡಿದ್ದಾರೆ.

ಹಿಂದೂ-ಮುಸ್ಲಿಂ ಐಕ್ಯತೆ ಮತ್ತು ಆರ್‌ಎಸ್‌ಎಸ್ ಸ್ಥಾಪಿಸಲು ಬಯಸುವ ಹಿಂದೂ ರಾಷ್ಟ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ನೀವು ನಿಮ್ಮನ್ನು ಹಿಂದೂ ಎಂದು ಕರೆದುಕೊಳ್ಳಲು ಬಯಸಿದರೆ, ಎಲ್ಲಾ ಮಾರ್ಗಗಳೂ ಒಂದೇ ತತ್ತ್ವದತ್ತ ಕೊಂಡೊಯ್ಯುತ್ತವೆ ಎಂಬುದನ್ನು ನೀವು ನಂಬಬೇಕು. ಪ್ರತಿಯೊಬ್ಬ ಮಾನವನಿಗೂ ತನ್ನದೇ ಆದ ಗೌರವವಿದೆ ಹಾಗೂ ಮಾನವರ ನಡುವೆ ಯಾವುದೇ ಭೇದಭಾವವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಹಳೆಯ ಸಭೆಯೊಂದರ ಅನುಭವವನ್ನು ನೆನಪಿಸಿಕೊಂಡ ಅವರು, “ಅಲ್ಲಿ ಮುಸ್ಲಿಂ ಸಹೋದರರೂ ಇದ್ದರು. ನೀವು ಹಿಂದೂ ಸಂಘಟನೆಯಾಗಿದ್ದು, ಹಿಂದೂ ರಾಷ್ಟ್ರ ಎಂದು ಹೇಳುತ್ತೀರಿ, ಹಾಗಾದರೆ ಮುಸ್ಲಿಮರಾದ ನಮ್ಮ ಕಥೆಯೇನು? ನಮ್ಮನ್ನು ಹೊರಹಾಕುತ್ತೀರಾ ಎಂದು ಅವರು ನನ್ನನ್ನು ಪ್ರಶ್ನಿಸಿದ್ದರು. ಅದಕ್ಕೆ ನಾನು ‘ಇಲ್ಲ, ಅದು ಹಿಂದುತ್ವವಲ್ಲ. ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಯೋಚಿಸಿದರೆ, ಅವನು ಹಿಂದೂವಾಗಿಯೇ ಉಳಿಯುವುದಿಲ್ಲ’ ಎಂದು ಉತ್ತರಿಸಿದ್ದೆ” ಎಂದು ವಿವರಿಸಿದರು.

ಧರ್ಮಕ್ಕಿಂತ ಮಾನವೀಯತೆಗೆ ಹೆಚ್ಚಿನ ಮಹತ್ವ ನೀಡುವ ಸಮಾಜದಿಂದ ತಾವು ಬಂದಿರುವುದಾಗಿ ತಿಳಿಸಿದ ಭಾಗವತ್, ಧರ್ಮಗಳು ವಿಭಿನ್ನವಾಗಿರಬಹುದು ಆದರೆ ಮಾನವೀಯತೆ ಒಂದೇ ಎಂಬುದು ನಮ್ಮ ಪರಂಪರೆಯಾಗಿದೆ ಎಂದಿದ್ದಾರೆ. ಸತ್ಯವು ಒಂದೇ ಆಗಿದ್ದು, ಪ್ರತಿಯೊಬ್ಬರ ದೃಷ್ಟಿಕೋನಕ್ಕೆ ತಕ್ಕಂತೆ ಅದನ್ನು ವಿಭಿನ್ನವಾಗಿ ವಿವರಿಸಲಾಗುತ್ತದೆ. ಇಂದಿನ ಜಗತ್ತಿನಲ್ಲಿ ಧರ್ಮಗಳನ್ನು ಮುಖ್ಯವಾಗಿ ಆಚರಣೆಗಳ ಮೂಲಕ ವ್ಯಾಖ್ಯಾನಿಸಲಾಗುತ್ತದೆ, ದೈವಿಕ ಮಾರ್ಗದಲ್ಲಿ ಸಾಗಲು ಮತ್ತು ಧಾರ್ಮಿಕ ಶಿಸ್ತಿಗೆ ಒಳಪಡಲು ಇಂತಹ ಆಚರಣೆಗಳ ನಿಯಮಗಳು ಅಗತ್ಯವಾಗಿವೆ ಎಂದು ಅವರು ಪ್ರತಿಪಾದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!