ಮೆಕ್ಸಿಕೊ: ಗುಂಡಿನ ಚಕಮಕಿಯಲ್ಲಿ ಭಾರತೀಯ ಮೂಲದ ಟೆಕ್ಕಿ, ಟ್ರಾವೆಲ್ ಬ್ಲಾಗರ್ ಮೃತ್ಯು
ಕ್ಯಾಲಿಫೋರ್ನಿಯ: ತನ್ನ ಹುಟ್ಟುಹಬ್ಬವನ್ನು ಆಚರಿಸಲು ಮೆಕ್ಸಿಕೋಗೆ ಪ್ರಯಾಣ ಬೆಳೆಸಿದ ಭಾರತೀಯ ಮೂಲದ ಮಹಿಳೆ, ಬುಧವಾರ, ಅಕ್ಟೋಬರ್ 20 ರಂದು ಮೆಕ್ಸಿಕೋದ ಟುಲುಮ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಎರಡು ಡ್ರಗ್ ದಂಧೆ ಗ್ಯಾಂಗ್‌ಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟರು ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಮಹಿಳೆ ಅಂಜಲಿ ರಯೋಟ್ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿ ವಾಸಿಸುತ್ತಿದ್ದರು. ಕ್ರಾಸ್‌ಫೈರ್‌ನಲ್ಲಿ ಜರ್ಮನ್ ಪ್ರವಾಸಿ ಜೆನ್ನಿಫರ್ ಹೆನ್‌ಜೋಲ್ಡ್ ಜೊತೆಗೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಕ್ಯಾಲಿಫೋರ್ನಿಯಾ ನ್ಯೂಸ್ಟೈಮ್ಸ್.ಕಾಮ್ ವರದಿ ಮಾಡಿದೆ.
ಅಂಜಲಿ ಅವರು ಒಬ್ಬರು ಟ್ರಾವೆಲ್ ಬ್ಲಾಗರ್ ಆಗಿದ್ದು, ಅಕ್ಟೋಬರ್ 22 ರಂದು ತನ್ನ ಹುಟ್ಟುಹಬ್ಬದ ಮೊದಲು ಸೋಮವಾರ ತುಳುಮ್‌ಗೆ ಬಂದಿದ್ದಳು. ಆಕೆಯ ಇನ್‌ಸ್ಟಾಗ್ರಾಮ್ ಖಾತೆಯು ಸ್ಯಾನ್ ಜೋಸ್‌ನಲ್ಲಿ ವಾಸಿಸುತ್ತಿರುವ ಭಾರತದ ಹಿಮಾಚಲ ಪ್ರದೇಶದ ಟ್ರಾವೆಲ್ ಬ್ಲಾಗರ್ ಎಂದಿದೆ. ಅಂಜಲಿ ಜುಲೈನಿಂದ ಲಿಂಕ್ಡ್‌ಇನ್‌ನಲ್ಲಿ ಸೀನಿಯರ್ ಸೈಟ್ ರಿಲೆಬಿಲಟಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಈ ಹಿಂದೆ ಯಾಹೂದಲ್ಲಿ ಉದ್ಯೋಗಿಯಾಗಿದ್ದರು.





