ಹಳ್ಳಕ್ಕೆ ಬಿದ್ದು ಬಸ್ ಅಪಘಾತ:
ಇಬ್ಬರು ಮೃತ್ಯು, ಹಲವರಿಗೆ ಗಾಯ
ಬೆಂಗಳೂರು: ತಡರಾತ್ರಿ ಮದುವೆ ಮುಗಿಸಿ ವಾಪಾಸ್ ಆಗುತ್ತಿದ್ದಂತ ಬಸ್ಸೊಂದು ಪಲ್ಟಿಯಾದ ಪರಿಣಾಮ, ಇಬ್ಬರು ಸಾವನ್ನಪ್ಪಿ 15ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ, ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಘಾಟಿ ಬಳಿ ನಡೆದಿದೆ.
ನಿನ್ನೆ ಘಾಟಿ ದೇವಾಲಯದಲ್ಲಿ ಮದುವೆ ಮುಗಿಸಿ ಹಿಂದಿರುಗುವಾಗ ನಿಯಂತ್ರಣ ತಪ್ಪಿ ದೊಡ್ಡಬಳ್ಳಾಪುರ ಮತ್ತು ಗೌರಿಬಿದನೂರು ರಸ್ತೆ ಮದ್ಯದ ಮಾಕಳಿ ಬೆಟ್ಟದ ಬಳಿ ಹಳ್ಳಕ್ಕೆ ಬಸ್ ಉರುಳಿ ಬಿದ್ದಿದೆ.
ಗಾಯಾಳು ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿದ್ದಂತ 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೊಡ್ಡಬಳ್ಳಾಪರು, ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಸ್ ತಡರಾತ್ರಿ ಉರುಳಿ ಬಿದ್ದರೂ, ಮಳೆಯಿಂದಾಗಿ ಯಾರು ರಕ್ಷಣೆ ಮಾಡಲಾಗದೇ ಗಾಯಾಳುಗಳು ಬೆಳಗಿನ ಜಾವದವರೆಗೆ ಬಸ್ ನಲ್ಲಿಯೇ ನರಳಾಡಿದ್ದಾರೆ ಎಂಬುದಾಗಿಯೂ ತಿಳಿದು ಬಂದಿದೆ.





