ʻಪ್ರಿಯದರ್ಶಿನಿʼ ಉಚಿತ ಬಸ್ ಪ್ರಯಾಣ ಯೋಜನೆ ಉದ್ಘಾಟನೆ ವೇಳೆ ಸಚಿವೆಯ ತಲೆಯ ಮೇಲೆ ಬಿದ್ದ ಬಿಸಿಬಿಸಿ ಪಾಯಸ
ತಿರುವನಂತಪುರಂ: ಕೇರಳದ ಕೊಲ್ಲಂನಲ್ಲಿ ʻಪ್ರಿಯದರ್ಶಿನಿʼ ಉಚಿತ ಬಸ್ ಪ್ರಯಾಣ ಯೋಜನೆ ಉದ್ಘಾಟನೆ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಬಿಂದು ಕೃಷ್ಣ ಅವರ ತಲೆಯ ಮೇಲೆ ಬಿಸಿ ಪಾಯಸ ಬಿದ್ದ ಆಘಾತಕಾರಿ ಘಟನೆ ನಡೆದಿದೆ.
ಕೊಲ್ಲಂ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ, ಸಾರ್ವಜನಿಕರು ಮತ್ತು ಗಣ್ಯರಿಗೆ ಪಾಯಸ ವಿತರಿಸಲು ಯೂತ್ ಕಾಂಗ್ರಸ್‌ನಿಂದ ವ್ಯವಸ್ಥೆ ಮಾಡಲಾಗಿತ್ತು. ಭಾರೀ ಜನದಟ್ಟಣೆಯಿಂದ ತುಂಬಿದ್ದ ಉದ್ಘಾಟನಾ ಬಸ್ಸಿನೊಳಗೆ ಪಾಯಸ ವಿತರಿಸುತ್ತಿದ್ದಾಗ ಬಿಸಿ ಪಾಯಸ ಆಕಸ್ಮಿಕವಾಗಿ ಚೆಲ್ಲಿ, ಸಚಿವೆಯ ತಲೆಯ ಮೇಲೆ ಬಿದ್ದಿದೆ.




