May 23, 2026

ಪ್ರೀತಿಸಿ ಮದುವೆಯಾದ ಪತಿಯ ಕಿರುಕುಳ: 4 ತಿಂಗಳ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ

0
image_editor_output_image-2133955227-1779527949546.jpg

ಕಲಬುರಗಿ: ಪ್ರೀತಿಸಿ ಮದುವೆಯಾದ ಪತಿಯ ನಿರಂತರ ಕಿರುಕುಳಕ್ಕೆ ಬೇಸತ್ತು 4 ತಿಂಗಳ ಗರ್ಭಿಣಿಯೊಬ್ಬರು ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ತಾಲ್ಲೂಕಿನ ಔರಾದ್ (ಬಿ) ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಶೃತಿ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಎರಡು ವರ್ಷಗಳ ಹಿಂದೆ ಈಕೆ ಗೋಪಾಲ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ವಿವಾಹದ ಬಳಿಕ ಕುಡಿತ, ಜೂಜಾಟ ಹಾಗೂ ದುಶ್ಚಟಗಳಿಗೆ ದಾಸನಾಗಿದ್ದ ಗೋಪಾಲ್, ಸಾಲ ತೀರಿಸಲು ಮನೆ ಮಾರಲು ಮುಂದಾಗಿದ್ದ. ಇದಕ್ಕೆ ಶೃತಿ ಸಹಿ ಹಾಕದಿದ್ದಾಗ ಆಕೆಗೆ ಮನಬಂದಂತೆ ಥಳಿಸಿ, ತಾಳಿ ಕಿತ್ತುಕೊಂಡು ದೌರ್ಜನ್ಯ ಎಸಗಿದ್ದ.

ಗಂಡನ ಕಾಟ ತಾಳಲಾರದೆ 15 ದಿನಗಳ ಹಿಂದೆ ಶೃತಿ ತವರು ಮನೆ ಸೇರಿದ್ದರು. ಆದರೆ, ನಿನ್ನೆ ಅಲ್ಲಿಗೂ ಬಂದ ಗೋಪಾಲ್ ಮತ್ತೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ತೀವ್ರ ಮನನೊಂದ ಶೃತಿ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!