ವಿಟ್ಲ: ಅಕ್ರಮ ಗೋಸಾಗಾಟ ಪತ್ತೆ: : ಆರೋಪಿ ಪರಾರಿ, ಗೋವುಗಳು, ಚಾಲಕನ ಸಹಿತ ವಾಹನ ವಶ
ಕೊಳ್ನಾಡು ಪಂಜರಕೋಡಿ ಎಂಬಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಪತ್ತೆ ಮಾಡಿ
ವಾಹನ ಚಾಲಕ ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಮುಖ್ಯ ಆರೋಪಿ ಬಶೀರ್ ಪರಾರಿಯಾಗಿದ್ದಾನೆ
ಚಾಲಕ ಬಾಳೆಪುಣಿ ನಿವಾಸಿ ಮೊಹಮ್ಮದ್ ಹನೀಫ್ ( 44)ನನ್ನು ವಶಕ್ಕೆ ಪಡೆಯಲಾಗಿದೆ.
ಮೇ 21ರಂದು ಬೆಳಗ್ಗೆ ಅಕ್ರಮ ಗೋಸಾಗಾಟದ ಮಾಹಿತಿ ಪಡೆದ ಪೊಲೀಸರು ಪಂಜರಕೋಡಿ ಎಂಬಲ್ಲಿ ತೆರಳಿ ಪಿಕ್ ಅಪ್ ವಾಹನವನ್ನು ತಡೆದು ನಿಲ್ಲಿಸಿದರು.. ಈ ವೇಳೆ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ಸ್ವೀಪ್ಟ್ ಕಾರಿನಲ್ಲಿದ್ದ ಬಶೀರ್ ಎಂಬಾತನು ಸ್ಥಳದಲ್ಲಿದ್ದ ಪೊಲೀಸರ ಪ್ರಾಣಕ್ಕೆ ಅಪಾಯವಾಗುವಂತೆ ತನ್ನ ಕಾರನ್ನು ಚಲಾಯಿಸಿಕೊಂಡು ಹೋಗಿ ಪರಾರಿಯಾದ. ಬಳಿಕ ಜಾನುವಾರು ಸಾಗಿಸುತ್ತಿದ್ದ ಪಿಕ್ ಆಫ್ ಅನ್ನು ಪರಿಶೀಲಿಸಿದಾಗ ಎರಡು ಜಾನುವಾರುಗಳನ್ನು ಹಿಂಸಾತ್ಮಕ ಕಟ್ಟಿರುವುದು ಪತ್ತೆಯಾಗಿದೆ. ಈ ಬಗ್ಗೆ ಪಿಕ್ ಅಪ್ ಚಾಲಕನಲ್ಲಿ ವಿಚಾರಿಸಿದಾ್ಗ ಯಾವುದೇ ಪರವಾನಿಗೆ ಪಡೆಯದೇ ಜಾನುವಾರುಗಳನ್ನು ವಧೆ ಮಾಡಲು ಸಾಗಿಸುತ್ತಿರುವುದಾಗಿ ತಿಳಿದು ಬಂತು..ಕೃತ್ಯಕ್ಕೆ ಬಳಸಿದ ವಾಹನ, ಎರಡು ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ
, ಆರೋಪಿ ಚಾಲಕ ಮೊಹಮ್ಮದ್ ಹನೀಪ್ ಹಾಗೂ ಬಶೀರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





