ಪುತ್ತೂರು: ಅಕ್ರಮ ಗೋಸಾಗಾಟ ತಡೆಯಲು ವಿಶೇಷ ಬಂದೋಬಸ್ತ್ ಏರ್ಪಡಿಸಬೇಕು: ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಘಟಕ ಆಗ್ರಹ
ಪುತ್ತೂರು: ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಅಕ್ರಮ ಗೋಸಾಗಾಟ ಪ್ರಕ್ರಿಯೆಗಳು ಜಾಸ್ತಿಯಾಗಿ ನಡೆಯುತ್ತಿದ್ದು, ಪೋಲೀಸರು ಇದನ್ನು ತಡೆಯಲು ವಿಶೇಷ ಬಂದೋಬಸ್ತ್ ಏರ್ಪಡಿಸಬೇಕು ಎಂದು ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಘಟಕ ಆಗ್ರಹಿಸಿದೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸಾದ್ ಗೋವಂಶದ ಹತ್ಯೆ, ಸಾಗಾಟ ಮತ್ತು ಬಲಿ ಕಟ್ಟುನಿಟ್ಟಾಗಿ ತಡೆಯಬೇಕು ಹಾಗು ಗೋವಂಶದ ಬಲಿ ಕೊಟ್ಟ ಸ್ಥಳವನ್ನು ಮುಟ್ಟುಗೋಲು ಹಾಕುವ ಕಾನೂನನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದ ಅವರು ಬಕ್ರಿದ್ ಹಬ್ಬ ಸಮೀಪಿಸುವ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮ ಗೋಸಾಗಾಟ ನಡೆಯಲಿದ್ದು, ಪೋಲೀಸರು ಅಲ್ಲಲ್ಲಿ ಚೆಕ್ ಪೋಸ್ಟ್ ಗಳನ್ನು ರಚಿಸಿ, ಹೆಚ್ಚುವರಿ ಪೋಲೀಸರನ್ನು ನೇಮಿಸಿ ಅಕ್ರಮ ತಡೆಯಬೇಕೆಂದು ಆಗ್ರಹಿಸಿದ ಅವರು BNS ACT 40 ರಲ್ಲಿ ಸಾರ್ವಜನಿಕರಿಗೆ ಅಕ್ರಮ ಕಂಡುಬಂದಲ್ಲಿ ತಡೆಯುವ ಅಂತವರನ್ನು ತಡೆಯುವ ಅವಕಾಶ ನೀಡಲಾಗಿದ್ದು, ಪೋಲೀಸರು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಅವರು ಆಗ್ರಹಿಸಿದರು.





