May 18, 2026

ವಿಟ್ಲ: ಎಜ್ಯುಕೇಶನಲ್ ಎಕ್ಸೆಲೆನ್ಸ್ ವತಿಯಿಂದ ಎಸ್ಸೆಸ್ಸೆಲ್ಸಿ ಸಾಧಕರಿಗೆ ಸನ್ಮಾನ-ಕಾರ್ಯಾಗಾರ

0
image_editor_output_image381999353-1779079385030

ವಿಟ್ಲ: ಎಜುಕೇಶನಲ್ ಎಕ್ಸೆಲೆನ್ಸ್ ಪೌಂಡೇಶನ್ ( ರಿ) ವಿಟ್ಲ ಇದರ ವತಿಯಿಂದ ವಿಟ್ಲ ಹೋಬಳಿಯ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 90 ಶೇಕಡಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಒಕ್ಕೆತ್ತೂರು ಗೋಲ್ಡನ್ ವಿಲ್ಲಾದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಒಟ್ಟು 48 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಲಾಯಿತು. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ 97 ಶೇಕಡ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 7 ವಿದ್ಯಾರ್ಥಿಗಳಿಗೆ ಇಇಎಫ್ ಖಜಾಂಜಿ ಶಂಸುದ್ದೀನ್ ಬೈರಿಕಟ್ಟೆ ವೇದಿಕೆಯಲ್ಲಿ ನಗದು ಪ್ರೋತ್ಸಾಹ ನೀಡಿ ಗೌರವಿಸಿದರು.

ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ ಎ ಗಫೂರ್ , ಸಿಎ ಅಬ್ದುಲ್ಲಾ ಮಾದುಮೂಲೆ, ಶಂಸುದ್ದೀನ್ ಬೈರಿಕಟ್ಟೆ , ಎಜುಕೇಶನಲ್ ಎಕ್ಸೆಲೆನ್ಸ್ ಪೌಂಡೇಶನ್ ನ ಅಧ್ಯಕ್ಷರಾದ ಜನಾಬ್ ಅಮ್ಜದ್ ಖಾನ್ ಪೋಲ್ಯ,
ಎಂಎಸ್ ಮಹಮ್ಮದ್, ತಾಜುದ್ದೀನ್ ಉಬೈದ್,ಅನಿವಾಸಿ ಉದ್ಯಮಿ ಶರೀಫ್ ಮೇಗಿನಪೇಟೆ, ಸಿರಾಜ್ ಮದಕ, ಅಬ್ಬಾಸ್ ಅಲಿ,ಝಬೈರ್ ಮಾಸ್ಟರ್ , ಜನಾಬ್ ಹೈದರ್ ನೀರ್ಕಜೆ, ಅಬ್ದುಲ್ ಹಮೀದ್ ಹಾಜಿ, ಶಾಹುಲ್ ಹಮೀದ್ ಭಾಗವಹಿಸಿದ್ದರು.

ರಫೀಕ್ ಮಾಸ್ಟರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಲಿಮ್ರಾ ಎಜು ಗ್ರೂಪ್ ಕರ್ನಾಟಕ ಇದರ ಅಧ್ಯಕ್ಷ ಶೇಖ್ ಇರ್ಪಾನಿ ಉಸ್ತಾದ್ ವಿದ್ಯಾರ್ಥಿಗಳಿಗೆ ಡ್ರಗ್ಸ್ ನಿಂದ ಆಗುವ ಅನಾಹುತದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.‌

ವಿಟ್ಲ ಇಇಎಫ್ ಮ್ಯಾನೇಜರ್ ಉಬೈದ್.ಕೆ ವಿಟ್ಲ ಸ್ವಾಗತಿಸಿದರು. ಆಶ್ರಾ ಅಳಿಕೆ ಹಾಗೂ ಬಲ್ಕೀಸ್ ಅಡ್ಯನಡ್ಕ ನಿರೂಪಿಸಿದರು. ಇಇಎಪ್ ಕೋಶಾಧಿಕಾರಿ ಶಂಸುದ್ದೀನ್ ಬೈರಿಕಟ್ಟೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!