May 16, 2026

ಕಾರವಾರ: ನಾಗರಹಾವು ಕಡಿದು ಕಾಂಗ್ರೆಸ್ ಮುಖಂಡ ಸಾವು

0
image_editor_output_image1389666145-1778933218077.jpg

ಕಾರವಾರ: ಗೋವಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕೇತನ್ ಭಾಟಿಕರ್ ಅವರು ನಾಗರಹಾವು ಕಡಿದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ್ ಮೃತಪಟ್ಟಿದ್ದಾರೆ.

ಕೇತನ್ ಭಾಟಿಕರ್ ಅವರು ಗೋವಾದ ಪೊಂಡಾದಿಂದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ ಬಳಿಯ ಅನಮೋಡ್ ಬಳಿ ಪಕ್ಷದ ಕಾರ್ಯ ನಿಮಿತ್ತ ಸ್ನೇಹಿತನೊಂದಿಗೆ ಬಂದಿದ್ದರು. ಮೂತ್ರ ವಿಸರ್ಜನೆಗಾಗಿ ಅನಮೋಡ್ ಘಟ್ಟ ಭಾಗದ ಕಾಡಿನಲ್ಲಿ ಕಾರು ನಿಲ್ಲಿಸಿ ತೆರಳಿದ್ದರು.

ಈ ವೇಳೆ ಕೇತನ್ ಭಾಟಿಕರ್ ಅವರಿಗೆ ನಾಗರಹಾವು ಕಡಿದಿದೆ. ತಕ್ಷಣ ಗೋವಾದ ಜಿಎಮ್‌ಸಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಕೋಲಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇತನ್ ಭಾಟಿಕರ್ ಅವರು ಗೋವಾದ ಕೃಷಿ ಸಚಿವ ರವಿ ನಾಯ್ಕ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಪೊಂಡಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

Leave a Reply

Your email address will not be published. Required fields are marked *

error: Content is protected !!