ಬಂಟ್ವಾಳ: ನಿಷೇಧಿತ ಮಾದಕ MDMA ಸಾಗಾಟ: ಬೋಳಂತೂರು ಶಾಹೀಂ ಸಹಿತ ಇಬ್ಬರ ಬಂಧನ
ಬಂಟ್ವಾಳ: ನಿಷೇಧಿತ ಮಾದಕವಸ್ತು MDMA ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು ₹46.25 ಲಕ್ಷ ಮೌಲ್ಯದ ಮಾದಕವಸ್ತು, ವಾಹನ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇ 2, 2026 ಸಂಜೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ ಅವರಿಗೆ MDMA ಸಾಗಾಟದ ಬಗ್ಗೆ ಖಚಿತ ಮಾಹಿತಿ ಲಭಿಸಿತು. ಕೂಡಲೇ ಠಾಣಾ ಸಿಬ್ಬಂದಿಯೊಂದಿಗೆ ಬಂಟ್ವಾಳ ಮಂಚಿ ಗ್ರಾಮದ ಪಂಜಾಲ ಕ್ರಾಸ್ ಬಳಿ ಬಲೆ ಬೀಸಲಾಯಿತು.
ಈ ವೇಳೆ KA-20-Z-9585 ನಂಬರಿನ ಬೊಲೆರೋ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ, ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಸಿಕ್ಕಿಬಿದ್ದರು.
ಮೊಹಮ್ಮದ್ ನಿಜಾಮುದ್ದೀನ್ (30) – ಬಂಟ್ವಾಳ ಬೊಳಂತೂರು ನಿವಾಸಿ
ಮೊಹಮ್ಮದ್ ಶಾಹೀಂ (19) – ನಿಜಾಮುದ್ದೀನ್‌ನ ಸಹೋದರ
ವಿಚಾರಣೆಯಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ಅಪರಿಚಿತ ನೈಜೀರಿಯಾದ ವ್ಯಕ್ತಿಯೊಬ್ಬರಿಂದ MDMA ಖರೀದಿಸಿ ಮಾರಾಟಕ್ಕೆ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.
ವಶಪಡಿಸಿಕೊಂಡಿದ್ದು:
423 ಗ್ರಾಂ MDMA – ಮೌಲ್ಯ ₹42,30,000
ಬೊಲೆರೋ ವಾಹನ – ಮೌಲ್ಯ ₹3,00,000
3 ಮೊಬೈಲ್ ಫೋನ್‌ಗಳು – ಮೌಲ್ಯ ₹95,000
ಒಟ್ಟು ಮೌಲ್ಯ: ₹46,25,000
ಕಾನೂನು ಕ್ರಮ:
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 68/2026, ಕಲಂ: 8(C) r/w 20(b)(ii)(C) NDPS Act 1985 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮಾದಕವಸ್ತು ಜಾಲದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





