March 31, 2026

ಇರಾನ್‌ನ ಮಶಾದ್‌ ವಿಮಾನ ನಿಲ್ದಾಣದ ಮೇಲೆ ಅಮೆರಿಕ ಕ್ಷಿಪಣಿ ದಾಳಿ: ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ ತೆರಳುತ್ತಿದ್ದ ವಿಮಾನ

0
image_editor_output_image-419506893-1774938561246.jpg

ಟೆಹ್ರಾನ್‌: ಇರಾನ್‌ನ ಮಶಾದ್‌ ವಿಮಾನ ನಿಲ್ದಾಣದ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯಿಂದ ಭಾರತಕ್ಕೆ ತೆರಳಬೇಕಿದ್ದ ʻಮಹಾನ್‌ ಏರ್‌ʼ ವಿಮಾನ ತೀವ್ರ ಹಾನಿಗೊಳಗಾಗಿದೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಇರಾನ್‌ ಇದನ್ನು ಅಮೆರಿಕದ ʻಯುದ್ಧಾಪರಾಧʼ ಎಂದು ಕರೆದಿದೆ.

ಅಮೆರಿಕ ದಾಳಿಯಿಂದ ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ ತೆರಳುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಲ್ಲದೇ ಇದು ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ವರದಿಗಳ ಪ್ರಕಾರ, ಮಶಾದ್‌ ಏರ್‌ಪೋರ್ಟ್‌ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಮಹಾನ್‌ ಏರ್‌ (Mahan Air) ವಾಯುಯಾನ ಸಂಸ್ಥೆಗೆ ಸೇರಿದ ವಿಮಾನಕ್ಕೆ ಹಾನಿಯಾಗಿದೆ. ಈ ವಿಮಾನವು ಔಷಧಗಳು, ಪರಿಹಾರ ಸಾಮಗ್ರಿಗಳು ಸೇರಿದಂತೆ ಮಾನವೀಯ ನೆರವು ಸಂಗ್ರಹಿಸಲು ಭಾರತಕ್ಕೆ (ದೆಹಲಿಗೆ) ಹಾರಲು ನಿಗದಿಯಾಗಿತ್ತು. ಅಷ್ಟರಲ್ಲೇ ಅಮೆರಿಕ ದಾಳಿಗೆ ತುತ್ತಾಗಿದ್ದು, ನೆರವು ಸಂಗ್ರಹ ಕಾರ್ಯಾಚರಣೆಗೂ ಅಡ್ಡಿಯಾಗಿದೆ.

ಭಾರತದಲ್ಲಿನ ಇರಾನ್‌ ರಾಯಭಾರ ಕಚೇರಿಯು ಈ ದಾಳಿಯನ್ನು ಅಮೆರಿಕದ ಯುದ್ಧಾಪರಾಧ ಎಂದು ಕರೆದಿದೆ. ಆದ್ರೆ ಅಮೆರಿಕದಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಜೊತೆಗೆ ಸಾವು ನೋವು ಸಂಭವಿಸಿದೆಯೇ? ಅನ್ನೋದ್ರ ಬಗ್ಗೆಯೂ ವಿವರಗಳು ಸ್ಪಷ್ಟವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!