ಮದುವೆ ದಿನವೇ ಸಹೋದರಿಯರು ಆತ್ಮಹತ್ಯೆ
ಜೋಧಪುರ: ಮದುವೆ ದಿನವೇ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೋಧ್‌ಪುರದ ಮನೈ ಗ್ರಾಮದಲ್ಲಿ ಸಂಭವಿಸಿದೆ.
ಮೃತರನ್ನು ಶೋಭಾ (25) ಮತ್ತು ವಿಮ್ಲಾ (23) ಎಂದು ಗುರುತಿಸಲಾಗಿದ್ದು, ಅವರ ವಿವಾಹ ಶನಿವಾರ ನಡೆಯಬೇಕಿತ್ತು, ಮತ್ತು ಶುಕ್ರವಾರ ರಾತ್ರಿ ಅವರ ವಿವಾಹದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ವಿಷಪ್ರಾಶನ ಮಾಡಿದ ಸ್ಥಿತಿಯಲ್ಲಿ ಪತ್ತೆಯಾದ ಸಹೋದರಿಯರನ್ನು ಕುಟುಂಬದ ಸದಸ್ಯರು ತಕ್ಷಣವೇ ಜೋಧ್ ಪುರ್ ನ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಿದ್ದಾರೆ. ಆದರೆ, ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.




