February 18, 2026

ಪುತ್ತೂರು | ಮಾದಕ ಸೇವಿಸಿ ಸಾರ್ವಜನಿಕರಿಗೆ ಅಸಭ್ಯವಾಗಿ ವರ್ತನೆ: ಆರೋಪಿಯಾ ಬಂಧನ

0
image_editor_output_image-1474859938-1771412520697.jpg

ಪುತ್ತೂರು: ಬಜತ್ತೂರು ಗ್ರಾಮದ ಕಾಂಚನ ಮುಕ್ವೆಯಲ್ಲಿ ವ್ಯಕ್ತಿಯೊಬ್ಬ ಸಿಗರೇಟ್ ಸೇದುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಸಾರ್ವಜನಿಕರಿಂದ ಬಂದ ಮಾಹಿತಿಯ ಆಧಾರದ ಮೇಲೆ, ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸುರೇಶ್ ಸಿ.ಟಿ. ಫೆಬ್ರವರಿ 17 ರಂದು ವ್ಯಕ್ತಿಯನ್ನು ವಶಕ್ಕೆ ಪಡೆದರು.

ವಶಕ್ಕೆ ಪಡೆದವನು ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಮಹಮ್ಮದ್‌ ಮೋಹಾದ್‌ ಎಸ್‌(33) ಎಂದು ಗುರುತಿಸಲಾಗಿದೆ.

ಮನೆಗೆ ಹೋಗುವಾಗ ಸಿಗರೇಟ್ ಸೇದುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ನಂತರ, ಆ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರು ಮಾದಕ ದ್ರವ್ಯಗಳನ್ನು ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 24/2026 ರಂತೆ ಕಲಂ 27(b) NDPS Act ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!