ಕೊಟ್ಟಾಯಂನಲ್ಲಿ ಕಂದಕಕ್ಕೆ ಉರುಳಿ ಬಿದ್ದ ಕಾರು: ಮಂಗಳೂರು ಮೂಲದ ಯುವಕ ಮೃತ್ಯು
ಕೊಟ್ಟಾಯಂ: ಕೊಟ್ಟಾಯಂನ ಕರುಕಾಚಲದಲ್ಲಿ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಮಂಗಳೂರು ಮೂಲದ ಯುವಕ ಸಾವನಪ್ಪಿದ ಘಟನೆ ನಡೆದಿದೆ.
ಮೃತರನ್ನು ಮೂಲತಃ ಮುಲ್ಕಿ ತಾಲೂಕಿನ ಅಂಗರಗುಡ್ಡೆ ನಿವಾಸಿ, ಪ್ರಸಕ್ತ ಕಾನದ ಚಿರಾಗ್ ಫ್ಲ್ಯಾಟ್ ನಲ್ಲಿ ವಾಸವಿದ್ದ ಶಾನವಾಝ್ ಯಾನೆ ಶಮೀಮ್(32) ಎಂದು ಗುರುತಿಸಲಾಗಿದೆ. ಇವರ ಜೊತೆ ಕಾರಿನಲ್ಲಿದ್ದ ಕಾಟಿಪಳ್ಳದ ಸಿರಾಜ್, ಕಾನ ನಿವಾಸಿ ಅಶ್ಫಾಕ್, ಸೂರಿಂಜೆ ನಿವಾಸಿ ಶಬೀರ್ ಹಾಗೂ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಸಿರಾಜ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕರುಕಾಚಲದಿಂದ ಕೊಟ್ಟಾಯಂಗೆ ಬರುತ್ತಿದ್ದ ಕಾರು ಚಂಪಕ್ಕರ ಆಶ್ರಮದಲ್ಲಿ 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿ ಐದು ಜನರಿದ್ದರು ಎಂದು ವರದಿಯಾಗಿದೆ. ಕಾರಿನಡಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಹೊರತೆಗೆಯಲು ಸುಮಾರು 20 ನಿಮಿಷಗಳು ಬೇಕಾಯಿತು ಎಂದು ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳೀಯರು ತಿಳಿಸಿದ್ದಾರೆ.




