ಒಕ್ಕೆತ್ತೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ.
ವಿಟ್ಲ; ಹಿದಾಯಾ ಫೌಂಡೇಶನ್ ಮಂಗಳೂರು ಹಾಗೂ ಬದ್ರಿಯಾ ಜುಮಾ ಮಸ್ಟಿದ್ ಒಕ್ಕೆತ್ತೂರು, ವಿಟ್ಲ ಇದರ ವತಿಯಿಂದ ಯೆನೆಪೋಯಾ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಒಕ್ಕೆತ್ತೂರು ನೂರ್ ಮಹಲ್ ಸಮುದಾಯ ಭವನದಲ್ಲಿ ನಡೆಯಿತು.
ಡಾ| ಫಾತಿಮಾ ಸುಹಾನಾ ಇವರು ಮಹಿಳೆಯರಿಗೆ ಆರೋಗ್ಯ ದ ಬಗ್ಗೆ ಮಾಹಿತಿ ನೀಡಿದರು.
ಖತೀಬ್ ಮುಹಮ್ಮದ್ ರಫೀಖ್ ಅಹನಿ ಇವರು ದುವಾ ನೆರವೇರಿಸಿದರು. ಹಿದಾಯ ಫೌಂಡೇಶನ್, ಮಂಗಳೂರು ಇದರ ಕಾರ್ಯಾಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.
ಹಿದಾಯ ಫೌಂಡೇಶನ್, ಮಂಗಳೂರು ಇದರ ಕೋಶಾಧಿಕಾರಿ ಮಹಮ್ಮದ್ ಶರೀಫ್ ಬೋಳಾರ್ ,ಮಸೀದಿ ಅಧ್ಯಕ್ಷ, ವಿ.ಎಮ್.ಆಶ್ರಫ್ ಹಾಜಿ ಕರಾವಳಿ, ಹಿದಾಯ ಫೌಂಡೇಶನ್ ಟ್ರಸ್ಟ್ ಅಬ್ಬಾಸ್, ಗ್ರಾಮೀಣ ಆರೋಗ್ಯ ವಿಭಾಗ, ಹಿದಾಯ ಫೌಂಡೇಶನ್ ಇದರ ಉಸ್ತುವಾರಿ ಅಬ್ದುಲ್ ಹಕೀಂ ಕಲಾಯಿ,,ನಿವೃತ್ತ ಉಪ ತಹಶಿಲ್ದಾರ ಡಿ.ಬಿ ಅಬೂಬಕ್ಕರ್ ಹಾಜಿ, ಗೌರವಾಧ್ಯಕ್ಷ ವಿ.ಎಸ್ ಇಬ್ರಾಹಿಂ ಸುಪರ್, ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್, ,ಬಂಟ್ವಾಳ ತಾಲೂಕು ಜಮೀಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ,ವಿಟ್ಲ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ವಿ.ಎಚ್.ಅಶ್ರಫ್ , ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಶಾಫಿ ಸಅದಿಯವರನ್ನು ಸನ್ಮಾನಿಸಲಾಯಿತು.
ಹಲವರು ಶಿಬಿರದ ಪ್ರಯೋಜನ ಪಡೆದರು.




