ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವ ಆಚರಣೆ
ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ ಗಣರಾಜ್ಯೋತ್ಸವವನ್ನುಉತ್ಸಾಹದಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಟ್ಲ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮಕೃಷ್ಣ ಧ್ವಜಾರೋಹಣ ಮಾಡಿ ವಿದ್ಯಾರ್ಥಿಗಳ ಪೆರೇಡ್‌ಗೆ ಗೌರವ ಸಲ್ಲಿಸಿದರು. ಅವರು ಸಂವಿಧಾನದ ಮಹತ್ವ ಹಾಗೂ ಶಿಸ್ತುಬದ್ಧ ನಾಗರಿಕರಾಗುವ ಕುರಿತು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

ಶಾಲಾ ಪ್ರಾಂಶುಪಾಲರು ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಶ್ರೀ ನೌಶೀನ್ ಬದ್ರಿಯಾ ಹಾಗೂ ಆಡಳಿತಾಧಿಕಾರಿ ಶ್ರೀ ಸಫ್ವಾನ್ ಪಿಲಿಕಲ್ ಉಪಸ್ಥಿತರಿದ್ದರು. ಆಯಿಷಾ ಶಾನುಮ್ (5ನೇ ತರಗತಿ) ವಿದ್ಯಾರ್ಥಿನಿ ಭಾಷಣ ಮಾಡಿದರು. ನಫೀಸತ್ ಸ್ವಾನಿಹಾ ಮತ್ತು ಫಾತಿಮಾ ಅಹ್ಷಾನಾ (9ನೇ ತರಗತಿ) ಕಾರ್ಯಕ್ರಮ ನಿರೂಪಿಸಿದರು. ಆಸಿಯಾ ಅರ್ಫಾ (9ನೇ ತರಗತಿ) ವಂದನಾರ್ಪಣೆ ಸಲ್ಲಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ವಿಶೇಷ ಗಣರಾಜ್ಯೋತ್ಸವ ಸ್ಪರ್ಧೆಗಳು ನಡೆಸಲಾಯಿತು.




