ವಿಟ್ಲ :ವಿಟ್ಠಲ ಪ್ರೌಢಶಾಲೆ ಯಲ್ಲಿ ಗಣರಾಜ್ಯೋತ್ಸವ ಆಚರಣೆ
ವಿಟ್ಲ ವಿಟ್ಠಲ ಪ್ರೌಢಶಾಲೆ ಯಲ್ಲಿ ನಡೆದ 77ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ
ನಿವೃತ್ತ ಸೇನಾಧಿಕಾರಿ ಸೇಸಪ್ಪ ಗೌಡ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಶೈಲೇಶ್, MRPL ಇಂಜಿನಿಯರ್ ಬಾಲನಾರಾಯಣ್, ವಿಟ್ಠಲ ಎಜುಕೇಶನ್ ಸೊಸೈಟಿ ಸಂಚಾಲಕ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಬಾಬು ಕೊಪ್ಪಳ, ಸದಸ್ಯರಾದ ರವಿಪ್ರಕಾಶ್ ಮತ್ತು ಸದಾಶಿವ ಬನ ಇವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ್ ಸ್ವಾಗತಿಸಿದರು. ವಾಣಿ ವಿ ವಂದಿಸಿದರು. ವೀಣಾ ನಿರೂಪಿಸಿದರು. ರಾಜಶೇಖರ ಸಹಕರಿಸಿದರು.


