ಕೊಳ್ನಾಡು ಗ್ರಾ.ಪಂ: ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ
ವಿಟ್ಲ: ಕೊಳ್ಳಾಡು ಗ್ರಾಮ ಪಂಚಾಯತ್ ನ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯು ದಿನಾಂಕ 22-01-2026 ನೇ ಗುರುವಾರದಂದು ಪೂವಾಹ್ನ 10.30 ಕ್ಕೆ ಕೊಳ್ಳಾಡು ಗ್ರಾಮ ಪಂಚಾಯತ್ ನೇತ್ರಾವತಿ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಕೆ ಅಶ್ರಫ್ ಇವರ ಮುಂದಾಳತ್ವದಲ್ಲಿ ಜರುಗಿತು.

ಪ್ರಥಮವಾಗಿ ಮಕ್ಕಳ ಗ್ರಾಮ ಸಭೆಯನ್ನು ನಡೆಸಲಾಗಿ ಕೊಳ್ಳಾಡು ಸುರಿಬೈಲು ಶಾಲಾ ವಿದ್ಯಾರ್ಥಿ ಕುಮಾರಿ ಅಫಾ ರವರು ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಪ್ರಾಸ್ತವಿಕವಾಗಿ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಹರೀಶ ಕೆ ಎ ರವರು ಮಕ್ಕಳ ಗ್ರಾಮ ಸಭೆಯ ಪ್ರಾಮುಖ್ಯತೆಯನ್ನು ತಿಳಿಸಿದರು. ಪೋಲೀಸ್ ಇಲಾಖೆಯಿಂದ ಮಕ್ಕಳಿಗೆ ಸಂಬಂಧಿಸಿದ ಪೋಕ್ಸ್ ಕಾಯಿದೆ ಮತ್ತು ಸಂಚಾರಿ ನಿಯಮಗಳು ಹಾಗೂ ಮಾದಕ ವೇಸನಗಳ ಬಗ್ಗೆ ಮಾಹಿತಿ ಮತ್ತು ಅವುಗಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ವಿವರವಾಗಿ ಸಭೆಗೆ ಹೇಳಿದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಮಕ್ಕಳ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಮಹಿಳಾ ಗ್ರಾಮ ಸಭೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕೆ ಅಶ್ರಫ್ ಇವರ ಅಧ್ಯಕ್ಷತೆಯಲ್ಲಿ ಜರುಗಿಸಲಾಯಿತು. ಮಹಿಳಾ ಸಂತ್ವಾನ ಕೇಂದ್ರದ ಸಾಮಾಜಿಕ ಕಾರ್ಯಕರ್ತ ಶ್ರೀ ಪ್ರಶಾಂತ್ ಇವರು ಮಹಿಳೆಯರಿಗೆ ಸಂಬಂಧಿಸಿದ ಕಾನೂನು ಅರಿವು ಮಾಹಿತಿಯನ್ನು ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ರೇಣುಕಾ ರವರು ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ಅಸ್ಮಾ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಲೋಚನಾ, ಶ್ರೀಮತಿ ಲವಿನಾ ಫೆರಾವೊ, ಶ್ರೀಮತಿ ನತಾಲಿಯ ಕುಟಿನ್ಹಾ, ಶ್ರೀಮತಿ ಜಯಂತಿ ಎಸ್ ಪೂಜಾರಿ, ಶ್ರೀ ಪ್ರಶಾಂತ್, ಶ್ರೀಮತಿ ರತ್ನ, ಶ್ರೀಮತಿ ಸೌಮ್ಯಲತಾ, ಶ್ರೀ ಎಸ್ ಎ ಅಬ್ದುಲ್ ಹಮೀದ್, ಶ್ರೀ ಹರೀಶ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ ನವ್ಯ, ಒಕ್ಕೂಟದ ಎಮ್.ಬಿ.ಕೆ, ಎಲ್.ಸಿ.ಆರ್.ಪಿ ಮತ್ತು ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಪಿ.ಡಿ.ಓ ರವರು ವಂದಿಸಿದರು.




