ವಿಟ್ಲ; ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮನೆ ಮನೆ ಕವಿಗೋಷ್ಠಿ
ವಿಟ್ಲ; ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಸಲ್ಪಡುವ ಮನೆ ಮನೆ ಕವಿಗೋಷ್ಠಿಯು ಸದಸ್ಯ ಅಬೂಬಕರ್ ಅನಿಲಕಟ್ಟೆ ಇವರ ಮನೆಯಲ್ಲಿ ನಡೆಯಿತು.
ಮೇಗಿನಪೇಟೆ ಪೊನ್ನೋಟು ಮನೆಯಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಎಚ್.ವಹಿಸಿದ್ದರು
ಕವಿಗಳಾದ ಜುವೈರಿಯಾ ಮುಫೀದಾ,ರಝಿಯಾ ಇರ್ವತ್ತೂರು,ಕೆ.ಎ.ಅಬ್ದುಲ್ ಅಝೀಝ್ ಪುಣಚ,ಎಂ.ಪಿ.ಬಶೀರ್ ಅಹಮದ್ ಬಂಟ್ವಾಳ, ಅಶ್ರಫ್ ಅಪೊಲೊ ಕಲ್ಲಡ್ಕ,ಸಲೀಂ ಬೋಳಂಗಡಿ ಕವನ ವಾಚನ ಮಾಡಿದರು.
ಈ ಸಂದರ್ಭ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯೆ ಸಾರಾ ಅಲಿ ಪರ್ಲಡ್ಕ ,ವಿಟ್ಲ ಮುಸ್ಲಿಂ ಒಕ್ಕೂಟ ಇದರ ಅಧ್ಯಕ್ಷ ವಿ.ಎಚ್.ಅಶ್ರಫ್ ಹಾಜಿ,ಕೆ.ಎಸ್ ಹಮೀದ್, ಅಬ್ದುಲ್ ರಝಾಕ್ ಅನಂತಾಡಿ, ಅಬ್ದುಲ್ ಖಾದರ್ ಕುಕ್ಕಾಜೆ, ಲತೀಫ್ ಅನಿಲಕಟ್ಟೆ, ಇಸಾಕ್ ವಿಟ್ಲ, ಪಿ.ಮಹಮ್ಮದ್, ಹನೀಫ್ ಅನಿಲಕಟ್ಟೆ,ಬಶೀರ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.
ಸದಸ್ಯ ಸಂಚಾಲಕ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಪ್ರಸ್ತಾವನೆ ಮಾಡಿದರು
ರೋಯಲ್ ಅಕಾಡೆಮಿ ಸಂಚಾಲಕಿ ರಾಝಿಯಾ ಮುಖ್ತಾರ್ ನಿರೂಪಿಸಿದರು.




