ಸುಳ್ಯ: ನದಿಗೆ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವು
ಸುಳ್ಯ: ಸುಬ್ರಹ್ಮಣ್ಯ ಕುಮಾರಧಾರ ನದಿಗೆ ತೆರಳಿದ್ದ ಇಬ್ಬರು ಯುವಕರು ಮುಳುಗಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಸುಳ್ಯ ಕೊಲ್ಲಮೊಗ್ರು ಗ್ರಾಮದ ಜಯರಾಮ ಎಂಬುವವರು ದೂರು ದಾಖಲಿಸಿರುತ್ತಾರೆ. ದೂರಿನಂತೆ ಜ.18 ರಂದು ಸಂಜೆ, ದೂರುದಾರರ ಸಹೋದರನ ಮಗ ಸುಜಿತ್ (28) ಮತ್ತು ಗೋಪಾಲ್ ನಾಯರ್ ಎಂಬವರ ಮಗ ಹರಿಪ್ರಸಾದ್ (39) ಎಂಬವರುಗಳು ಸುಬ್ರಹ್ಮಣ್ಯದ ಕುಲ್ಕುಂದ ಎಂಬಲ್ಲಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಾಹಿತಿ ಬಂದ ಮೇರೆಗೆ, ಸ್ಥಳಕ್ಕೆ ತೆರಳಿ ನೋಡಿದಾಗ ಸುಜಿತ್ ಮತ್ತು ಹರಿಪ್ರಸಾದ್ ರವರುಗಳ ಮೃತದೇಹ ನದಿದಡದಲ್ಲಿತ್ತು.
ಘಟನೆಯ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರಲ್ಲಿ ವಿಚಾರಿಸಿದಾಗ, ಮೃತ ಹರಿಪ್ರಸಾದ್ ಹಾಗೂ ಸುಜಿತ್ ಅವರುಗಳು ತನ್ನ ಇತರ ಸ್ನೇಹಿತರೊಂದಿಗೆ ನದಿದಡದಲ್ಲಿದ್ದಾಗ, ಸುಜಿತ್ ಈಜಾಡಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಆತನಿಗೆ ಈಜು ಬಾರದೇ ನೀರಿನಲ್ಲಿ ಮುಳುಗಿರುತ್ತಾನೆ. ಆತನನ್ನು ರಕ್ಷಿಸಲು ಮತ್ತೋರ್ವ ಮೃತ ಹರಿಪ್ರಸಾದ್ ಎಂಬಾತನು ನದಿನೀರಿಗೆ ಇಳಿದು ಇರ್ವರೂ ಮೃತಪಟ್ಟಿರುವುದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬರ್: 02/2026 ಕಲಂ: 194 BNSS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ.




