ದೇವರ ಉತ್ಸವಕ್ಕೆ ತಂದಿದ್ದ ಆನೆ ಏಕಾಏಕಿ ಕುಸಿದು ಬಿದ್ದು ಸಾವು
ಮಲಪ್ಪುರಂ: ದೇವರ ಉತ್ಸವಕ್ಕೆ ತಂದಿದ್ದ ಆನೆಯೊಂದು ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಮಲಪ್ಪುರಂನ ವಲ್ಲಿಕ್ಕುನ್ನು ಎಂಬಲ್ಲಿ ನಡೆದಿದೆ.
ವಲ್ಲಿಕುನ್ನು ಅಯ್ಯಪ್ಪ ದೇವಸ್ಥಾನದ ಉತ್ಸವಕ್ಕೆ ಬಾಲುಸ್ಸೇರಿ ಗಜೇಂದ್ರನ್ ಎಂಬ ಆನೆಯನ್ನು ಕರೆತರಲಾಗಿತ್ತು, ಉತ್ಸವದ ಸಿದ್ದತೆಗೆ ಆನೆಗೆ ಸ್ನಾಮ ಮಾಡಿಸುವ ವೇಳೆ ಏಕಾಏಕಿ ಆನೆ ಕುಸಿದು ಬಿದ್ದಿದೆ. ಕೂಡಲೇ ಪಶುವೈದ್ಯರು ಚಿಕಿತ್ಸೆ ನೀಡಿದರೂ ಅದಾಗಲೇ ಆನೆ ಸಾವನಪ್ಪಿದೆ.
ಈ ಆನೆ ಕೋಝಿಕ್ಕೋಡ್‌ನ ಬಾಲುಸ್ಸೇರಿಯ ಸ್ಥಳೀಯರ ಒಡೆತನದಲ್ಲಿದೆ. ಆನೆಯ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಅರಣ್ಯ ಇಲಾಖೆಯ ತನಿಖೆ ನಡೆಸುತ್ತಿದ್ದು, ನಂತರ ಅಂತ್ಯಕ್ರಿಯೆ ನಡೆಯಲಿದೆ. ಮಲಪ್ಪುರಂ ಜಿಲ್ಲೆ, ಕೋಝಿಕ್ಕೋಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ನಡೆದ ಅನೇಕ ಸಣ್ಣ ಮತ್ತು ದೊಡ್ಡ ಹಬ್ಬಗಳಲ್ಲಿ ಗಜೇಂದ್ರನ್ ಸಕ್ರಿಯವಾಗಿ ಭಾಗವಹಿಸಿತ್ತು.




