ಪ್ರೀತಿ ವಿಚಾರಕ್ಕೆ ಮನನೊಂದು ಬಾಲಕಿ ನೇಣು ಬಿಗಿದು ಆತ್ಮಹತ್ಯೆ
ನೆಲಮಂಗಲ: ಪ್ರೀತಿ ವಿಚಾರಕ್ಕೆ ಮನನೊಂದು ಬಾಲಕಿಯೊಬ್ಬಳು ನೇಣಿಗೆ ಶರಣಾದ ಘಟನೆ ಬೆಂಗಳೂರು ಉತ್ತರದ ಅಂಚೇಪಾಳ್ಯ ಪ್ರಕೃತಿ ಲೇಔಟ್‌ನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಬಾಲಕಿಯನ್ನು ತೇಜಸ್ವಿನಿ (17) ಎಂದು ಗುರುತಿಸಲಾಗಿದೆ. ಪ್ರೀತಿಸುವ ವಿಷಯಕ್ಕೆ ಯುವಕನ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು (ಪೊ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನೆಲಮಂಗಲದ ಶವಗಾರಕ್ಕೆ ರವಾನಿಸಲಾಗಿದೆ.




