ಬಂಟ್ವಾಳ: ನಸುಕಿನ ವೇಳೆ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ
ಬಂಟ್ವಾಳ: ಬಿ.ಸಿ.ರೋಡ್ ತಲಪಾಡಿ ಎಂಬಲ್ಲಿ ಮಂಗಳವಾರ ನಸುಕಿನ ವೇಳೆ ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿಯಾಗಿ ಮಗುಚಿದೆ.
ಘಟನೆಯಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಪವರ್ ಸಬ್ ಸ್ಟೇಶನ್ ಎದುರಲ್ಲೇ ಘಟನೆ ನಡೆದಿದೆ. ವಿದ್ಯುತ್ ತಂತಿಗಳು ಹೆದ್ದಾರಿಯಲ್ಲಿ ತುಂಡಾಗಿ ಬಿದ್ಷುಕೊಂಡಿದ್ದವು. ಘಟನೆಯಿಂದಾಗಿ ಬಿ.ಸಿ.ರೋಡ್ ಸುತ್ತಮುತ್ತ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.




