January 31, 2026

ವಿಟ್ಲ: SJM ವತಿಯಿಂದ ನಾಳೆ SBS ಜಾಥಾ: ಯಶಸ್ವಿಗೊಳಿಸಲು SMA ಕರೆ

0
image_editor_output_image-1499785366-1767448927892

ವಿಟ್ಲ: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ವಿಟ್ಲ ರೇಂಜ್ SJM ಕರ್ನಾಟಕ ರಾಜ್ಯ ಸಮಿತಿ ನಿರ್ದೇಶನದಂತೆ ರಾಜ್ಯಾದ್ಯಾಂತ ಎಲ್ಲಾ ರೇಂಜ್ ಗಳಲ್ಲಿ ನಡೆಯುತ್ತಿರುವ ಆಲ್ಕೊಹಾಲ್ ಹಾಗೂ ಮಾದಕ ದ್ರವ್ಯ ವಿರುದ್ಧವಾಗಿ ಮುಲ್ತಖತ್ತುಲಬಾ ಏಕದಿನ ವಿದ್ಯಾರ್ಥಿ ಸಂಗಮ, ವಿದ್ಯಾರ್ಥಿ ರ್ಯಾಲಿ 2026 ಜನವರಿ 04 ಆದಿತ್ಯವಾರ(ನಾಳೆ) ಸಂಜೆ 3:00 ಘಂಟೆಗೆ ವಿಟ್ಲ ನಾಡ ಕಛೇರಿಯಿಂದ ಬ್ರೈಟ್ ಸಭಾಭವನದ ತನಕ  ನಡೆಯಲಿದೆ.

ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ ಎಂ ಎ ವಿಟ್ಲ ರೀಜನಲ್ ಸಮಿತಿ ಕರೆ ನೀಡುತ್ತಾ, ಪ್ರಸ್ತುತ ಕಾರ್ಯಕ್ರಮದಲ್ಲಿ ಮದರಸ ವಿದ್ಯಾರ್ಥಿ ಗಳು ಹಲವಾರು ವಿದ್ವಾಂಸರು ಉಲಮಾ ಉಮರಾ ನಾಯಕರು ಸಾಮಾಜಿಕ ಗಣ್ಯರು ಭಾಗವಹಿಸಲಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ SMA ವಿಟ್ಲ ರೀಜನಲ್ ಅಧ್ಯಕ್ಷರಾದ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಶರೀಫ್ ಸಹದಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!