ಮಕ್ಕಳ ಮೆದುಳಿನ ಸಾಮರ್ಥ್ಯ ಇಮ್ಮಡಿ ಗೊಳಿಸಿರಿ: ಅಬ್ದುಲ್ ರಝಾಕ್
ಬಂಟ್ವಾಳ: ಮಕ್ಕಳಲ್ಲಿ ಹುದುಗಿರುವ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸುವ ವಿಭಿನ್ನ ತರಬೇತಿ ಕಾರ್ಯಾಗಾರ ಮಕ್ಕಳ ಮೇಲೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಿದೆ ಎಂದು ಫಾತಿಮಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಉಪಾಧ್ಯಕ್ಷರಾದ ಹಾಜಿ ಜಿ. ಅಬ್ದುಲ್ ರಝಾಕ್ ಅಭಿಪ್ರಾಯ ಪಟ್ಟರು.
ಅವರು ಇಂದು ಮೀಫ್ ಸಂಸ್ಥೆಯ ವತಿಯಿಂದ ಜೆಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ಎರಡು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮೀಫ್ ಸಂಸ್ಥೆಯ ಕನ್ವೀನರ್ ಅಝೀಝ್ ಅಂಬರ್ವಾಲಿ, ಹಿದಾಯ ಫೌಂಡೇಶನ್ ಕಾರ್ಯದರ್ಶಿ ಹಕೀಂ ಕಲಾಯಿ, ಜೆಮ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಗೋಳ್ತಮಜಲು, ತರಬೇತುದಾರರಾದ ನೆಲ್ಸನ್ ಕ್ಯಾಸ್ಟಲಿನೊ, ಇಬ್ರಾಹಿಂ ಸಮೀರ್ ಉಪಸ್ಥಿತರಿದ್ದರು.
ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಹನ್ನೇರಡು ಶಾಲೆಗಳಿಂದ ಸುಮಾರು ನೂರಮೂವತ್ತಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜೆಮ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ನಿರಂಜನ್ ಡಿ ವಂದಿಸಿದರು, ಶಿಕ್ಷಕಿ ಹರ್ಷಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.




